ಬೆಳಗಾವಿ
ಬಿಮ್ಸ್’ ಮಹಾವಿದ್ಯಾಲಯದಿಂದ ಕೊಡಗು ಮೂಲದ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ಕಾಣೆ.

ಕೊಡಗಿನಿಂದ ಬೆಳಗಾವಿ ಬಿಮ್ಸ್’ಗೆ ಎಂ.ಬಿ.ಬಿ.ಎಸ್ ಕಲಿಯಲು ಬಂದಿದ್ದ ವಿದ್ಯಾರ್ಥಿ ಹಾಸ್ಟೇಲಿನಿಂದ ಕಾಣೆಯಾಗಿರುವ ಘಟನೆ ನಡೆದಿದೆ.
ಬೆಳಗಾವಿಯ ಬಿಮ್ಸ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಕಲಿಯುತ್ತಿದ್ದ ಕೊಡಗು ಮೂಲದ ಆಲನ್ ಕೃಷ್ಣಾ (19) ಏಪ್ರೀಲ್ 24 ರಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಆಲನ್ ತಂದೆ ಸಸಿ ವಿ.ಕೆ. ಅವರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತನ ಕುರಿತು ಮಾಹಿತಿ ದೊರೆತಲ್ಲಿ, ಎಪಿಎಂಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0831-2405250 ಅಥವಾ ಆಲನ್ ತಂದೆ ಮೊಬೈಲ್ ನಂ. 9480290450ನ್ನು ಸಂಪರ್ಕಿಸಲು ಕೊರಲಾಗಿದೆ.