
ಚಿಕ್ಕೋಡಿ:ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವು ಮೇ 6 ರಿಂದ 9 ವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾಕಮೀಟಿಯ ಸದಸ್ಯರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಶ್ರೀಆದಿಶಕ್ತಿ,ಜಗನ್ಮಾತೆ,ಮಹಾತಾಯಿ,ಜಾಗೃತದೇವಿ,ಮಹಾಶಕ್ತಿ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ ಮೇ 6 ರಂದು ಪ್ರಾರಂಭವಾಗಲಿದೆ.ಅದೇ ದಿನ ರಾತ್ರಿ 8 ಗಂಟೆಗೆ ದೇವಿಗೆ ಸೀರೆ ಏರಿಸುವುದು,ಉಡಿತುಂಬುವುದು,ನೈವ್ಯದ್ಯ,ಹಾಗೂ ಕರಿಕಟ್ಟುವುದು ಬಳಿಕ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ.ಮೇ 7 ರಂದು ಮುಂಜಾನೆ 6 ಗಂಟೆಗೆ ವಿಧಿ ವಿಧಾನ ಪ್ರಕಾರ ಪೂಜೆ,ಮಧ್ಯಾಹ್ನ 12 ಗಂಟೆಗೆ ಶ್ರೀ ಭಾವೇಶ್ವರಿದೇವಿಯ ಪಲ್ಲಕಿ ಮೆರವಣಿಗೆ ,ಶೆಹನಾಯಿ ವಾದ್ಯ ಸೇವೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.ರಾತ್ರಿ 10.30 ಕ್ಕೆ ಹೆಣ್ಣು ಸಂಸಾರದ ಕಣ್ಣು ಅರ್ಥಾತ್ ಮನೆ ಬೆಳಗಿದ ಮುತೈದೆ ನಾಟಕ ಪ್ರದರ್ಶನಗೊಳ್ಳಲಿದೆ.
ಮೇ 8 ರಂದು ಮುಂಜಾನೆ 10 ಗಂಟೆಗೆ ಜನರಲ್ 1 ಕುದುರೆ ಹಲ್ಲು ಹಚ್ಚದ 1 ಕುದುರೆ ಗಾಡಿ ಶರ್ಯತ್ತು, 10.30 ಕ್ಕೆ ಜೋಡು ಕುದುರೆ ಗಾಡಿ ಶರ್ಯತ್ತು,11 ಗಂಟೆಗೆ ಕುದುರೆ ಶರ್ಯತ್ತು,11.15 ಕ್ಕೆ ಜೋಡೆತ್ತಿನ ಗಾಡಿ ಶರ್ಯತ್ತುಗಳು ನಡೆಯಲಿದೆ.ರಾತ್ರಿ 9.30 ಕ್ಕೆ ಗರತಿ ಹೆಣ್ಣಿಗೆ ಗರ್ವದ ಗಂಡ ಎನ್ನುವ ನಾಟಕ ಹಾಗೂ ಮೇ 9 ರಂದು ರಾತ್ರಿ 10.30 ಕ್ಕೆ ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರಕಾರ ನಾಟಕ ಜರುಗಲಿದೆ.ಮೂರು ದಿನಗಳ ಕಾಲ ಜರುಗುವ ಜಾತ್ರಾಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಜಾತ್ರಾಮಹೋತ್ಸವ ಕಮಿಟಿಯ ಸದಸ್ಯರು ಮನವಿಯನ್ನು ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪರಗೌಡ ಪಾಟೀಲ, ರುದ್ರಗೌಡ ಪಾಟೀಲ, ಕೇದಾರಗೌಡ ಪಾಟೀಲ, ಬಸಗೌಡ ಪಾಟೀಲ, ಗಜಾನನ ಪಾಟೀಲ, ಮಹಾಂತೇಶ ಪಾಟೀಲ, ಚಿದಾನಂದ ಪಾಟೀಲ, ಮಲ್ಲಗೌಡ ಪಾಟೀಲ, ಶ್ರೀನಾಥ ಪಾಟೀಲ, ಮಹಾದೇವ ಪಾಟೀಲ,ಸಂತೋಷ ಪಾಟೀಲ ಸೇರಿದಂತೆ ಜಾತ್ರಾ ಕಮೀಟಿಯ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.