ಬಸವಭಕ್ತರ ಆಶಯ ಈಡೇರಿಕೆಗೆ ಕಾಲಸನ್ನಿಹಿತ:ಸಚಿವ ಎಂಬಿಪಿ ಭರವಸೆಗೆ.

ವಿಜಯಪುರ: ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿ ಆದೇಶಿಸಿದೆ. ಬಸವಣ್ಣನವರ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಇಂದು ಬಸವಣ್ಣನವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಸವಣ್ಣನವರ ಜನ್ಮಭೂಮಿ ಯಲ್ಲಿಯೇ ಬಸವ ಜಯಂತಿ ಆಚರಿಸಬೇಕು ಎನ್ನುವ ಕೂಗು ಬಹಳ ಹಳೇಯದು. ಯಾಚ ಸರ್ಕಾರಗಳು ಕೂಡಾ ಬಸವ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಆಚರಣೆಗೆ ಮುಂದಾಗಿರಲಿಲ್ಲ. ಇದೀಗ ಸಚಿವ ಎಂ.ಬಿ.ಪಾಟೀಲ ಬಸವ ಜಯಂತಿಯನ್ನು ವಿಜಯಪುರ ಜಿಲ್ಲೆಯಲ್ಲಯೇ ಆಚರಿಸುವ ಭರವಸೆ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಇಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಸರ್ಕಾರಿ ಕಾರ್ಯಕ್ರಮ ಆಚರಿಸಲು ಬಸವ ಭಕ್ತರು ಹಾಗೂ ಜಿಲ್ಲೆಯ ಆಗ್ರಹಿಸುತ್ತಲೇ ಇದ್ದರು. ಕಳೆದ ವರ್ಷ ಸರ್ಕಾರ ಜ.8 ರಂದು ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿ ಆದೇಶಿಸಿ ಸರ್ಕಾರ ಬಸವ ಭಕ್ತರಿಗೆ ಸಂತಸ ತರಿಸಿತ್ತು.
ಬಸವ ಜನ್ಮಭೂಮಿ ಬಸವನ ಬಾಗೇವಾಡಿಯಲ್ಲಿ ಸರ್ಕಾರದಿಂದ ಬೃಹತ್ ಕಾರ್ಯಕ್ರಮ ಆಯೋಜಿಸಿ ಬಸವಣ್ಣನವರ ತತ್ವಗಳು, ವಚನಗಳ ಸಾರದ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂಬ ಒಕ್ಕೋರಲ ಆಗ್ರಹ ಕೇಳಿಬರುತ್ತಿತ್ತು. ಇದೀಗ ಬಸವಣ್ಣನವರ ಅನುಯಾಯಿ ಸಚಿವ ಎಂ.ಬಿ.ಪಾಟೀಲ ಬಹುದಿನಗಳ ಕನಸನ್ನು ಸಾಕಾರಗೊಳಿಸುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಮುಂದಿನ ವರ್ಷ ಬಸವ ಜನ್ಮಭೂಮಿಯಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವದು ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ಬಸವ ಜಯಂತಿ ವಿಜಯಪುರದಲ್ಲಿ ಆಚರಣೆ ಮಾಡುವ ಭರವಸೆ ನೀಡಿದ್ದಾರೆ. ಬಸವ ಜಯಂತಿಯನ್ನು ಬಸವಣ್ಣನವರ ಜನ್ಮ ಭೂಮಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆಸಬೇಕೆಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಮುಂದಿನ ಬಾರಿ ಬಸವ ಜಯಂತಿ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಮಾಡಿದ್ದಕ್ಕೆ ಕೂಡಲಸಂಗಮದಲ್ಲಿ ಏಪ್ರಿಲ್ 30ರಂದು ರಾಜ್ಯಮಟ್ಟದ ಕಾರ್ಯಕ್ರಮ ಮಾಡಲಾಗುತ್ತಿದೆ. ಬಸವ ಸಮಿತಿ ರಾಜ್ಯ ಮಟ್ಟದಲ್ಲಿ ಬಸವ ಜಯಂತಿ ಮಾಡಲಾಗುತ್ತಿದ್ದಾರೆ. ಸಿಎಂ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ವರ್ಷ ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಮಾಡುತ್ತೇವೆ ಜೊತೆಗೆ ಬಸವ ಕಲ್ಯಾಣದಲ್ಲೂ ಬಸವ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಜಾತಿಯಿಂದ ಮನುಷ್ಯನನ್ನು ಮೇಲು ಕೀಳು ಎಂದು ನೋಡುವ ಅಸ್ಪೃಶ್ಯತೆ ಉತ್ತುಂಗದಲ್ಲಿದ್ದ 12ನೇ ಶತಮಾನದಲ್ಲಿಯೇ, ಕರ್ನಾಟಕದಲ್ಲೊಂದು ವಚನ ಕ್ರಾಂತಿಯ ಮೂಲಕ ಸಮಾನತೆ ಸಾರಿದವರು. ಪ್ರಪಂಚದಲ್ಲಿಯೇ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಮೊದಲಿಗೆ ಬಸವಣ್ಣ. ಪ್ರಪಂಚಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಬಸವಣ್ಣ. ಇದೀಗ ಬಸವ ಜಯಂತಿಯನ್ನು ವಿಜಯಪುರ ಜಿಲ್ಲೆಯಲ್ಲಿ ಆಚರಿಸುವ ಮೂಲಕ ಬಸವಣ್ಣನವರ ವಿಚಾರಧಾರೆಗಳು ಭೂಮಿ ಇರುವವರೆಗೂ ಶಾಶ್ವತವಾಗಿರಿಸುವ ಕಾರ್ಯಕ್ರಮದ ಭರವಸೆ ಸಿಕ್ಕಿದ್ದು ಬಸವ ಭಕ್ತರಲ್ಲಿ ಸಂತಸ ಮೂಡಿಸಿದೆ.
.