ಬೆಳಗಾವಿ
ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಮನೆ ಮನೆಗಳಿಗೆ ತೆರಳುತ್ತಿರುವ ಖತರನಾಕ್ ಕಳ್ಳರ ಗ್ಯಾಂಗ್.

ಬೆಳಗಾವಿ: ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಮನೆ ಮನೆಗಳಿಗೆ ನುಗ್ಗಿ ಖತರನಾಕ್ ಕಳ್ಳರ ಗ್ಯಾಂಗೊಂದು ರಾಜರೋಷವಾಗಿ ಕಳ್ಳತನಕ್ಕೆ ಇಳಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಮನೆ ಮನೆಗಳಿಗೆ ನುಗ್ಗಿ ಖತರನಾಕ್ ಕಳ್ಳರ ಗ್ಯಾಂಗೊಂದು ರಾಜರೋಷವಾಗಿ ಕಳ್ಳತನಕ್ಕೆ ಇಳಿದಿದೆ. ಕಳೆದ ಹಲವು ದಿನಗಳಿಂದ ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡುಕೈಯಲ್ಲಿ ಚಾಕು ತಲವಾರ ಹಿಡಿದು ಕಳ್ಳತನಕ್ಕೆ ಯತ್ನಿಸಲಾಗುತ್ತಿದ್ದು, ಕಳ್ಳರ ಚಲನ ವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದಲಗಾ ಪಟ್ಟಣದಲ್ಲಿ ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿ ಈ ಘಟನೆ ನಡೆದಿದೆ.