
ಹುಕ್ಕೇರಿ : ಹುಕ್ಕೇರಿ ನಗರದಲ್ಲಿ ತಾಲೂಕಾ ಆಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡ ವಿಶ್ವ ಜ್ಯೋತಿ ಬಸವಣ್ಣನವರ ಜಯಂತಿ ಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮತ್ತು ಅವುಜಿಕರ ಆಶ್ರಮದ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಪುರಸಭೆ ಅದ್ಯಕ್ಷ ಇಮ್ರಾನ ಮೊಮಿನ ಬಸವೇಶ್ವರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಶಾಸಕ ನಿಖಿಲ್ ಕತ್ತಿ ಎತ್ತುಗಳ ಮೇರವಣೆಗೆಗೆ ಚಾಲನೆ ನೀಡಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಇಂದು ಹುಕ್ಕೇರಿ ಮತಕ್ಷೆತ್ರದಲ್ಲಿ ಅದ್ದೂರಿಯಾಗಿ ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಯುವಕರು ವಿಶ್ವ ಗುರು ಬಸವೇಶ್ವರರ ತತ್ವಗಳನ್ನು ಮತ್ತು ಅವುಗಳ ಮಹತ್ವವನ್ನು ಅರಿತು ಸಾಗಬೇಕಾಗಿದೆ ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಬಸವ ವಚನಗಳನ್ನು ಮತ್ತು ಅವುಗಳ ತತ್ವಗಳನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯ ಯುವಕರು ಮಾಡ ಬೇಕಾಗುದೆ ಎಂದರು
ಬಸವ ಜಯಂತಿ ಆಚರಣೆ ಸಮಿತಿ ಸದಸ್ಯ ಸುಭಾಷ ನಾಯಿಕ ಮಾತನಾಡಿ ಇಂದು ದೇಶದ ಸಂಸದ ಭವನದಲ್ಲಿ ಬಸವ ಜಯಂತಿ ಆಚರಿಸುವ ಮೂಲಕ ಬಸವೇಶ್ವರರು ರಾಷ್ಟ್ರ ನಾಯಕ ರಾಗಿದ್ದಾರೆ, ಇಂದು ಹುಕ್ಕೇರಿ ನಗರದಲ್ಲಿ ಬಸವಣ್ಣನ ಪ್ರತೀಕವಾದ ಎತ್ತುಗಳ ಪ್ರದರ್ಶನ ಮಾಡಿ ಅವುಗಳ ಮೇರವಣೆಗೆ ಮಾಡಲಾಗುತ್ತಿದೆ ಎಂದರು ಸುಮಾರು ಐವತ್ತು ಜೋಡಿ ಎತ್ತುಗಳನ್ನು ಅಲಂಕಾರ ಮಾಡಿ ನಗರದಲ್ಲಿ ಮೇರವಣೆಗೆ ಮಾಡಲಾಯಿತು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ ಬಸವ ಜಯಂತಿ ಆಚರಿಸಿ ಸಿಹಿ ಹಂಚಿದರು.
ಮೇರವಣೆಗೆ ಉಸ್ತುವಾರಿ ಚಂದ್ರಶೇಖರ ಗಂಗಣ್ಣವರ ಮಾತನಾಡಿ ಮೇರವಣೆಗೆಯಲ್ಲಿ ಭಾಗವಹಿಸಿದ ಎತ್ತು ಗಳಿಗೆ ಜಾರಕಿಹೋಳಿ ಫೌಂಡೇಶನ್ ವತಿಯಿಂದ ಸುಗ್ರಾಸ ನೀಡಲಾಗುತ್ತಿದೆ ಹಾಗೂ ವಿಜಯ ರವದಿ ಸಂಸ್ಥೆಯಿಂದ ಪ್ರಥಮ ,ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಗ್ರೇಡ್ – 2 ತಹಸಿಲ್ದಾರ ಪ್ರಕಾಶ ಕಲ್ಲೋಳ್ಳಿ, ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ, ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ವಿಜಯ ರವದಿ, ಮಾಜಿ ಪುರಸಭೆ ಅದ್ಯಕ್ಷ ಅಣ್ಣಪ್ಪಾ ಪಾಟೀಲ, ತಮ್ಮನಗೌಡ ಪಾಟೀಲ, ಕಬೀರ ಮಲ್ಲಿಕ, ಗೀರಿಶ ಪಾಟೀಲ,
ಸುನಿಲ್ ಭೈರನ್ನವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ,ಸಾರ್ವಜನಿಕರು, ನ್ಯಾಯವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.