ಕ್ರಾಂತಿ ಮಹಿಳಾ ಮಂಡ ಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ವೃದ್ಧಾಶ್ರಮದಲ್ಲಿ ವಾರ್ಷಿಕೋತ್ಸವ ಆಚರನೆ.

ಏಪ್ರಿಲ್ 28ರಂದು ಕ್ರಾಂತಿ ಮಹಿಳಾ ಮಂಡ ಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಬಾಮನೆವಾಡಿಯಲ್ಲಿರುವ ಶಾಂತಾಯಿ ವೃದ್ಧಾಶ್ರಮದಲ್ಲಿ ನಮ್ಮ ಮಂಡಳದ ವಾರ್ಷಿಕೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು ನಮ್ಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಉದ್ಘಾಟಕರಾಗಿ ಆಗಮಿಸಿದ ನಿವೃತ್ತ ಕರ್ನಲ್ ಆಫ್ ಇಂಡಿಯನ್ ಆರ್ಮಿಯ ಪಿ ಜಿ ಜಿ ಸುಂದರಿಯವರು ದೀಪ ಪ್ರಜ್ವಲ್ನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು ಅವರು ನಮ್ಮ ದೇಶಕ್ಕೆ ನೀಡಿರುವ ವೈದ್ಯಕೀಯ ಸೇವೆಯನ್ನು ಗುರುತಿಸಿ ಅವರಿಗೆ ನಮ್ಮ ಎರಡು ಸಂಸ್ಥೆಗಳ ವತಿಯಿಂದ ಚಾಣಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ಜನರು ತಮ್ಮ ಹುಟ್ಟು ಹಬ್ಬಗಳನ್ನು ಮದುವೆ ವಾರ್ಷಿಕೋತ್ಸವಗಳನ್ನು ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಮಾಡಿ ದುಂದು ವೆಚ್ಚ ಮಾಡುತ್ತಾರೆ ಆದರೆ ನಿಮ್ಮ ಮಂಡಲದ ವಾರ್ಷಿಕೋತ್ಸವವನ್ನು ನಿಸರ್ಗ ರಮನೀಯ ಪರಿಸರದಲ್ಲಿರುವ ವೃದ್ಧಾಶ್ರಮದ ಹಿರಿಯರೊಂದಿಗೆ ಆಚರಿಸುವುದನ್ನು ನೋಡಿ ನನಗೆ ತುಂಬಾ ಹೆಮ್ಮೆ ಅನಿಸಿತು. ನಿಮ್ಮ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದನ್ನು ತಿಳಿದು ನನಗೆ ತುಂಬಾ ಸಂತೋಷವಾಯಿತು ಇಂದಿನ ಯುವ ಪೀಳಿಗೆಗೆ ನೀವು ಮಾದರಿಯಾಗಿದ್ದೀರಿ ನಿಮ್ಮ ಯಾವುದೇ ಕಾರ್ಯಕ್ಕೆ ಸಹಾಯ ಸಹಕಾರ ಮಾಡಲು ನಾನು ಯಾವಾಗಲೂ ನಿಮ್ಮ ಜೊತೆ ಕೈಜೋಡಿಸುತ್ತೇನೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ನಾವು ಆಶ್ರಮಕ್ಕೆ ಬಂದು ಹಿರಿಯರನ್ನು ನೋಡಲು ಅವಕಾಶ ಮಾಡಿ ಮತ್ತು ನನ್ನ ಅಳಿಲು ಸೇವೆಯನ್ನು ಗುರುತಿಸಿ ಚಾಣಕ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ನಿಮ್ಮ ಎರಡು ಸಂಸ್ಥೆಗಳಿಗೆ ಧನ್ಯವಾದಗಳು ಎಂದು ಹೇಳಿದರು ಅದೇ ರೀತಿ ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಸದಸ್ಯರಾದ ಸುಶೀಲ ಗುರವ ಇವರ ಪತಿ ಶ್ರೀ ಲಕ್ಷ್ಮಿಕಾಂತ್ ಗುರವ ಹಿರಿಯ ನ್ಯಾಯವಾದಿ ಇವರನ್ನು ಕೂಡ ನಮ್ಮ ಎರಡು ಸಂಸ್ಥೆಗಳಿಂದ ಸನ್ಮಾನಿಸಲಾಯಿತು ನಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಂತಾಯಿ, ವೃದ್ಧಾಶ್ರಮದ
ಸಂಚಾಲಕರಾದ ಸರ್ ವಿಜಯ್ ಮೋರೆ ಯವರು ನಮ್ಮ ಎರಡು ಮಂಡಳದ ಸಮಾಜಮುಖಿ ಕಾರ್ಯಗಳನ್ನು ನೋಡಿ ಮೆಚ್ಚುಗೆ ಮಾತುಗಳನ್ನು ವ್ಯಕ್ತಪಡಿಸಿದರು ಬೆಳಗಾವಿಯಲ್ಲಿ ಯಾವ ಮಹಿಳಾ ಮಂಡಳ ಒಳ್ಳೆಯ ಕೆಲಸಗಳನ್ನು ಮಾಡುತ್ತದೆ ಎಂದು ನನಗೆ ಕೇಳಿದರೆ ನಾನು ಕ್ರಾಂತಿ ಮಹಿಳಾ ಮಂಡಲ ಮತ್ತು ಉಮಾ ಸಂಗೀತ ಪ್ರತಿಷ್ಠಾನ ಎಂದು ಹೇಳುತ್ತೇನೆ ಎಂದು ಹೆಮ್ಮೆಯಿಂದ ಹೇಳಿದರು.
ನೀವು ಮುಂದೆ ಶಾಲಾ- ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾರ್ಯಗಳನ್ನು ಮಾಡಲು ಪ್ರೇರೇಪಿಸಬೇಕು ಎಂದು ಹೇಳಿದರು ಆಶ್ರಮದ ಎಲ್ಲೇ ಹಿರಿಯರಿಗೂ ದಿನನಿತ್ಯ ಬಳಕೆಯಾಗುವ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ನಮ್ಮ ಎರಡು ಸಂಸ್ಥೆಗಳ ವತಿಯಿಂದ ವಿತರಿಸಲಾಯಿತು ನಮ್ಮ ಮಂಡಳದ ವಾರ್ಷಿಕೋತ್ಸವದ ಅಂಗವಾಗಿ ನಮ್ಮ ಎರಡು ಮಂಡಳದ ಸದಸ್ಯರು ಸಂಗೀತ ಮತ್ತು ನೃತ್ಯಗಳನ್ನು ಏರ್ಪಡಿಸಿ ಆಶ್ರಮದ ಎಲ್ಲ ಹಿರಿಯರೊಂದಿಗೆ ಕುಣಿದು, ಮನರಂಜನೆಯನ್ನು ನೀಡಿದರು ನಮ್ಮ ಮಂಡಳ ದ ಅಧ್ಯಕ್ಷರಾದ ಶ್ರೀಮತಿ ಮಂಗಲ್ ಮಠದ ದವರು ಸ್ವಾಗತಿಸಿದರು ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ ರತ್ನಪ್ಪ ಗೋಳ ಪ್ರಸ್ತಾವಿಕವಾಗಿ ಮಾತನಾಡಿದರು.
ಪಾರ್ವತಿ ಪಾರ್ವತಿ ಪಾರ್ವತಿ ಡಂಗ್ ಮತ್ತು ಆಶಾ ಹೊಸಮನಿ ಇವರು ಪ್ರಾರ್ಥನೆಯನ್ನು ಹಾಡಿದರು ಶೈಲಾ ಮಾಸ್ತೇ ಮತ್ತು ಸುಶೀಲ ಗುರವ ಅತಿಥಿಗಳ ಪರಿಚಯ ಮಾಡಿದರು ಲೀಲಾ ಸೇರಿ ವಂದನಾರ್ಪಣೆಯನ್ನು ಮಾಡಿದರು ಕಾರ್ಯಕ್ರಮದಲ್ಲಿ ಶ್ರೀಮತಿ ಮಾರಿಯ ವಿಜಯ್ ಮೋರೆ ಯೋಧರಾದ ಸಿಕಂದರ್ ಸರ್ ನ್ಯಾಯವಾದಿ ಲಕ್ಷ್ಮಿಕಾಂತ್ ಗುರವ ಹಾಗೂ ನಮ್ಮ ಮಂಡಳದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಆಶ್ರಮದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ನಮ್ಮ ಎರಡು ಸಂಸ್ಥೆಗಳಿಂದ ಮಾಡಲಾಗಿತ್ತು