ರಾಜಕೀಯರಾಜ್ಯ

ಸಿಎಂ ಸಿದ್ದರಾಮಯ್ಯ ಮೇಲೆ ಗರಂ ಆದ ಮಾದಿಗ ಸಮುದಾಯ;ಮಾದಿಗರ ಕೆಂಗಣ್ಣಿಗೆ ಗುರಿಯಾದ್ರಾ ಸಿಎಂ..?

ಒಳಮೀಸಲಾತಿ ಸಮೀಕ್ಷಾ ಕಾರ್ಯದ ಉಪಸಮಿತಿಯಲ್ಲಿ ಮಾದಿಗರ ಕಡಗಣನೆ ಮಾಡಿದ ಆರೋಪ ಕೇಳಿ ಬಂದಿದೆ. ಮೇ 5 ರಿಂದ ನಡೆಯುವ ಸಮೀಕ್ಷೆಗೆ ಮಾದಿಗ ಸಮುದಾಯದ ಅಧಿಕಾರಿಗಳನ್ನು ನೇಮಿಸದೇ ಮೋಸ ಮಾಡಿದ್ದಾರೆ ಎಂದು ಮಾದಿಗ ಸಮುದಾಯದ ಮುಖಂಡ ಮುತ್ತಣ್ಣ ಬೆನ್ನೂರ ಗಂಭೀರ ಆರೋಪ ಮಾಡಿದ್ದಾರೆ.

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಮೇ 5 ರಿಂದ 17 ರವರೆಗೆ ಎಸ್ ಸಿ ಕೌಟುಂಬಿಕ ಸಮೀಕ್ಷೆ ನಡೆಸಲಾಗುತ್ತಿದೆ. ಸರ್ಕಾರ ರಚಿಸಿರುವ ಸಮೀಕ್ಷಾ ಸಮನ್ವಯ ಉಪಸಮಿತಿಯಲ್ಲಿ ಎಸ್ ಸಿ ಜಾತಿಯಲ್ಲಿರುವ ಬಲಗೈ ಸಮುದಾಯದ ಭೋವಿ, ಲಂಬಾಣಿ,ಬೇಡಜಂಗಮರನ್ನು ಸದಸ್ಯರನ್ನಾಗಿ ನೇಮಿಸಿದೆ.ಮಾದಿಗ ಸಮುದಾಯವನ್ನು ಈ ಸಮೀಕ್ಷಾ ಕಾರ್ಯದಲ್ಲಿ ದೂರವಿಟ್ಟಿದೆಹೀಗಾಗಿ ಕೊಡಲಸಂಗಮ ಕಾರ್ಯಕ್ರಮದಲ್ಲಿ ಸಿಎಂ ಗೆ ಘೇರಾವ್‌ಗೆ ನಿರ್ಧಾರವನ್ನು ಕೈಗೊಂಡಿದ್ದು, ಸಿಎಂಗೆ ಕಪ್ಪುಬಟ್ಟೆ ಪ್ರದರ್ಶಿಸುವ ಎಚ್ಚರಿಕೆಯನ್ನು ರಾಜ್ಯ ಮಾದಿಗ ಮಹಾಸಭಾ ರಾಜ್ಯ ಅಧ್ಯಕ್ಷ ಮುತ್ತಣ್ಣ ಬೆನ್ನೂರ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button