ಬಾಗಲಕೋಟೆ
ಕೂಡಲ ಸಂಗಮದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ಹಿನ್ನೆಲೆ ಭವ್ಯ ಮೆರವಣಿಗೆ.

ಬಾಗಲಕೋಟೆ: ಬಸವ ಜಯಂತಿ ನಿಮಿತ್ಯ ಕೂಡಲ ಸಂಗಮದಲ್ಲಿ ಬಸವಣ್ಣನ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲ ಸಂಗಮದಲ್ಲಿ ಸಚಿವ ಶಿವರಾಜ್ ತಂಗಡಗಿ,ಶಾಸಕ ಕಾಶಪ್ಪನವರ್ ನೇತೃತ್ವದಲ್ಲಿ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.
ಸಂಗಮನಾಥನ ದೇಗುಲದಿಂದ ಬಸವೇಶ್ವರ ವೃತ್ತದಿಂದ ವರೆಗೆ ಮೆರವಣಿಗೆ ಸಾಗಿತು. ಕೂಡಲ ಸಂಗಮದಲ್ಲಿ ಸರ್ಕಾರದಿಂದ ಅನುಭವ ಮಂಟಪ, ಶರಣ ವೈಭವ ಕಾರ್ಯಕ್ರಮ ಹಿನ್ನೆಲೆ ಬಸವಜಯಂತಿ ನಿಮಿತ್ಯ ಅದ್ದೂರಿ ಮೆರವಣಿಗೆಯನ್ನು ನಡೆಸಲಾಗುತ್ತಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದು, ಸಾವಿರಾರು ಬಸವಾಭಿಮಾನಿಗಳು ಉಪಸ್ಥಿತರಿದ್ಧರು.