ಬೆಳಗಾವಿ ಖಡೇ ಬಝಾರ್’ನಲ್ಲಿ ಗೋವಿಗೆ ನಾಯಿ ಕಡಿತ, ಸಹಾಯಕ್ಕೆ ಧಾವಿಸಿದ ಗೋರಕ್ಷಕರು.

ಬೆಳಗಾವಿ: ಬೀದಿ ಹಸುಗಳನ್ನು ಗೋಶಾಲೆಗೆ ಕಳುಹಿಸಲು ಒತ್ತಾಯ
ಬೆಳಗಾವಿಯ ಖಡೇ ಬಝಾರ್’ನಲ್ಲಿ ಹಸುವಿನ ಮೇಲೆ ನಾಯಿ ದಾಳಿ ಮಾಡಿದ್ದು, ಗೋರಕ್ಷಕರು ಸಹಾಯಕ್ಕೆ ಧಾವಿಸಿದ ಘಟನೆ ನಡೆದಿದೆ.
ಬೆಳಗಾವಿ ಖಡೇ ಬಝಾರ್’ನಲ್ಲಿ ಹಸುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಈ ಕುರಿತು ಬೆಳಗಾವಿಯ ಗೋರಕ್ಷಕರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗೋರಕ್ಷಕ ತಂಡದ ಗೋರಕ್ಷಕ ನಿಲೇಶ್ ಹಾಗೂ ಸಂಜಯ ನಾಯಕ್. ಸಾಗರ್ ಪತಕಿ, ವಿವೇಕ್ ವಿರೂಪಾಕ್ಷಿ.
ವಿಶ್ವನಾಥ್ ಫಾಸಲಕರ್, ಅಭಿಷೇಕ್ ಫಳಾಂಗೆಕರ ಅವರು ಪಶುಸಂಗೋಪನಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿ ಸ್ಥಳಕ್ಕೆ ಕರೆಯಿಸಿಕೊಂಡರು. ಸಿಸಿಬಿ ಅಧಿಕಾರಿ ರಾಜು ಶಂಕರ್ ನವರ್ ಹಾಗೂ ಹರೀಶ್ ರಾಥೋಡ್ ಸಹಾಯದಿಂದ ಗಾಯಗೊಂಡ ಗೋವನ್ನು ಕೂಡಲೇ ಗೋಶಾಲೆಗೆ ರವಾನಿಸಿ ಚಿಕಿತ್ಸೆಯನ್ನು ನೀಡಲಾಯಿತು. ಈ ವೇಳೆ ನಗರದಲ್ಲಿರುವ ಎಲ್ಲ ಬೀದಿ ಹಸುಗಳನ್ನು ಗೋಶಾಲೆಗೆ ರವಾನಿಸಬೇಕು ಇಲ್ಲದಿದ್ದರೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಗೋರಕ್ಷಕರು ಮಹಾನಗರ ಪಾಲಿಕೆ ಆಯುಕ್ತರಿಗೆ ಎಚ್ಚರಿಕೆಯನ್ನು ನೀಡಿದರು.