ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಏಳುಕೋಟಿ ಮೈಲಾರಲಿಂಗೇಶ್ವರನ ಭಕ್ತ.

ಹಾವೇರಿ: ಏಳುಕೋಟಿ ಮೈಲಾರಲಿಂಗೇಶ್ವರ ಭಕ್ತರೊಬ್ಬರು ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾದರಿ ರೈತನ ಹಾವೇರಿ ತಾಲೂಕು ಬಸಾಪುರದಲ್ಲಿದ್ದಾರೆ.
ಹೌದು, ಬಸಾಪುರದ ನಾಗಪ್ಪ ಮುದ್ದಿ ಮಾವು ಬೆಳೆದು ಕೋಟ್ಯಾಧಿಪತಿಯಾಗಿರುವ ಮಾವು ಬೆಳೆಗಾರ. ವರ್ಷದಿಂದ ವರ್ಷಕ್ಕೆ ಇವರ ತೋಟದಲ್ಲಿ ಅತ್ಯಧಿಕ ಪ್ರಮಾಣದ ಮಾವಿನ ಇಳುವರಿ ಸಿಗುತ್ತಿದೆ. ಸಂಪೂರ್ಣ ಸಾವಯವವಾಗಿ ಮಾವು ಬೆಳೆಯುವ ನಾಗಪ್ಪ ಮುದ್ದಿ ಅವರಿಗೆ ಮಾವಿನ ತೋಟಕ್ಕೆ ವರ್ತಕರು ವರ್ಷದ ಗುತ್ತಿಗೆ ಪಡೆಯಲು ಮುಗಿಬೀಳುತ್ತಾರೆ.
ಸಂಪೂರ್ಣವಾಗಿ ಸಾವಯವವಾಗಿರುವ ಮಾವಿನ ತೋಟಕ್ಕೆ ವರ್ಷದಿಂದ ವರ್ಷಕ್ಕೆ ಅತ್ಯಧಿಕ ಪ್ರಮಾಣದ ಹಣ ಸಿಗುತ್ತಿದೆ. 12 ಎಕರೆ ವಿಸ್ತೀರ್ಣದ ತೋಟವನ್ನು ಪ್ರಸ್ತುತ ವರ್ಷ ವ್ಯಾಪಾರಿಗಳು 60 ಲಕ್ಷ ರೂಪಾಯಿಗೆ ಗುತ್ತಿಗೆ ಪಡೆದಿದ್ದಾರೆ. ಮೂರು ಎಕರೆಯ ತೋಟ 20 ಲಕ್ಷ ರೂಪಾಯಿ ಗುತ್ತಿಗೆ ಪಡೆದಿದ್ದಾರೆ. 10 ಎಕರೆ ತೋಟದ ಮಾವನ್ನು ನಾಗಪ್ಪ ಮುದ್ದಿಯೇ ಇಟ್ಟುಕೊಂಡಿದ್ದಾರೆ. ಆ ಮಾವನ್ನು ಹುಲ್ಲುಹಾಕಿ ಸಾವಯುವವಾಗಿ ಮಾವು ಹಣ್ಣು ಮಾಡಿ ಮಾರಾಟ ಮಾಡುತ್ತಾರೆ.
ಮೂರು ಎಕರೆಯಿಂದ 25 ಎಕರೆ ಕೃಷಿ: ನಾಗಪ್ಪ ಮುದ್ದಿ ಪ್ರಸ್ತುತ ವರ್ಷ ಮಾವು ಬೆಳೆದು ತೋಟ ಗುತ್ತಿಗೆ ನೀಡುವ ಮೂಲಕ ಕೋಟಿ ರೂಪಾಯಿ ಆದಾಯ ಗಳಿಸಿದ್ದಾನೆ. ಸತತ 30 ವರ್ಷಗಳಿಂದ ಸಾವಯುವ ಮಾವು ಬೆಳೆಯುವ ನಾಗಪ್ಪ ಮುದ್ದಿ ಸಾವಯವ ಪದ್ಧತಿಯಲ್ಲೇ ಮಾವಿನ ಕಾಯಿಗಳನ್ನು ಹಣ್ಣು ಮಾಡಿಸುತ್ತಾರೆ. ಮೂರು ಎಕರೆಯಿಂದ ಆರಂಭಿಸಿದ ಇವರ ಮಾವು ಕೃಷಿ ಇದೀಗ 25 ಎಕರೆಗೆ ತಲುಪಿದೆ.
ತೋಟದಲ್ಲಿ ಬೆಳೆದ ಮಾವು ಬೆಳೆಯನ್ನ ನಾಗಪ್ಪ ಮುದ್ದಿಯೇ ಸಾವಯುವವಾಗಿ ಹಣ್ಣು ಮಾಡಿ ಮಾರಾಟ ಮಾಡುತ್ತಾರೆ. ಸಾವಯವವಾಗಿ ಬೆಳೆದು ಸಾವಯುವವಾಗಿ ಹಣ್ಣು ಮಾರಾಟ ಮಾಡುವ ಇವರ ಹಣ್ಣು ಖರೀದಿಗೆ ಜನರು ಮುಗಿಬೀಳುತ್ತಾರೆ. ವಾಣಿಜ್ಯ ನಗರಿ ಮುಂಬೈನ ವ್ಯಾಪಾರಿಯೊಬ್ಬರು ಇವರ 12 ಎಕರೆ ತೋಟವನ್ನ ಈ ಬಾರಿ ಗುತ್ತಿಗೆ ಪಡೆದಿದ್ದಾರೆ.