Uncategorized
ಮೆಣಸಿನ ಕಾಯಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಪಲ್ಟಿ

ವಿಜಯಪುರ: ಮೆಣಸಿನ ಕಾಯಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಸಂಭವಿಸಿದೆ.
ಹೌದು !
ಬೆಳಗಾವಿಯಿಂದ ಹೈದ್ರಾಬಾದ್ ಗೆ ಹಸಿ ಮೆಣಸಿನಕಾಯಿಯನ್ನ ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಶುಕ್ರವಾರ ತಡರಾತ್ರಿ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಕುಂಟೋಜಿ ಪೆಟ್ರೋಲ್ ಪಂಪ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿಯಾಗಿದೆ ಡಿಕ್ಕಿಯಾದ ರಬಸಕ್ಕೆ ವಾಹನ ಪಲ್ಟಿಯಾಗಿದ್ದು ರಸ್ತೆ ಡಿವೈಡರ್ ಮಧ್ಯ ಅಳವಡಿಸಿದ್ದ ವಿದ್ಯುತ್ ದ್ವೀಪ ನೆಲಕ್ಕುರುಳಿದೆ, ಅದೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,
ಬಸವನಬಾಗೇವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.