ಬೆಳಗಾವಿ

ಮರಣೋತ್ತರ ಅಂಗಾಂಗ ಕುರಿತು ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಜಾಗೃತಿ ಫಲಕ…

ಬೆಳಗಾವಿ:  ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಫಲಕವನ್ನು ಅಳವಡಿಸಲಾಯಿತು. ಮರಣೋತ್ತರ ಅಂಗಾಂಗ ದಾನವು ಮಹತ್ವದ ಕಾರ್ಯವಾಗಿದೆ. ಈ ಹಿನ್ನೆಲೆ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಫಲಕವನ್ನು ಅಳವಡಿಸಲಾಗಿದೆ. ಈ ಫಲಕದಲ್ಲಿ QR ಕೋಡ್ ಅನ್ನು ಅಳವಡಿಸಲಾಗಿದ್ದು, ಇದು ಅಂಗಾಂಗ ದಾನದ ಕುರಿತು ಮಾಹಿತಿಯನ್ನು ನೀಡಲಿದೆ.

ಈ ಸಂದರ್ಭದಲ್ಲಿ ರೋಟೆರಿಯನ್ ಅವಿನಾಶ್ ಪೋತದಾರ, ಇ-ಕ್ಲಬ್ ಅಧ್ಯಕ್ಷೆ ರೋಟೆರಿಯನ್ ಲಕ್ಷ್ಮೀ ಮುತಾಲಿಕ್, ರೂಪಾ ಪೋತದಾರ, ಕವೀತಾ ಕಣಗಣ್ಣಿ, ರೋಟೆರಿಯನ್ ಪಕ್ರಾಶ ಮಿರ್ಜಿ, ವಿಜಯ ಭಾಗವತ್, ರೋಟೆರಿಯನ್ ನರಸಿಂಹ ಜೋಷಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button