ರಾಜಕೀಯರಾಜ್ಯಹುಬ್ಬಳ್ಳಿ

ಸುಹಾಸ್ ಶೆಟ್ಟಿ ಪ್ರಕರಣ ರಾಜ್ಯ ಸರ್ಕಾರದ ಗಂಭೀರವಾಗಿ ಪರಿಗಣಿಸಿಲ್ಲ : ಸಂಸದ ಜಗದೀಶ್ ಶೆಟ್ಟರ್ಸುಹಾಸ್ ಶೆಟ್ಟಿ ಪ್ರಕರಣ ರಾಜ್ಯ ಸರ್ಕಾರದ ಗಂಭೀರವಾಗಿ ಪರಿಗಣಿಸಿಲ್ಲ : ಸಂಸದ ಜಗದೀಶ್ ಶೆಟ್ಟರ್

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ದುರ್ದೈವದ ಸಂಗತಿ. ಸುಹಾಸ್ ಶೆಟ್ಟಿ ಕೊಲೆಯಾದ ನಂತರ ಸಹ ರಾಜ್ಯ ಸರ್ಕಾರದ ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಲೆ, ಕೋಮು ಗಲಭೆ ಆರಂಭವಾಗಿವೆ.

ಸುಹಾಸ್ ಶೆಟ್ಟಿ ಕೊಲೆಯೇ ಇದೊಂದು ಉದಾಹರಣೆಯಾಗಿದೆ ಎಂದು ಮಾಜಿ‌ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ‌ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಇಷ್ಟೊಂದು ಘಟನೆ ಆದ ಬಳಿಕ ಸಹ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಹದಗೆಟ್ಟದೆ. ಆಡಳಿತ ವ್ಯವಸ್ಥೆ ಸಹ ಹಾಳಾಗಿದೆ. ಸಿಎಂ ಸಿದ್ಧರಾಮಯ್ಯಾನವರ ಸಂಪೂರ್ಣ ವಿಫಲ ಆಗಿದೆ. ಮುಸ್ಲಿಂ ತುಷ್ಟೀಕರಣ ಹೆಚ್ಚಾದ ಕಾರಣ ಹಾಡುಹಗಲೇ‌ ಕೊಲೆ ಸುಲಿಗೆ ಆರಂಭ ಆಗಿವೆ. ಇಂದು ರಾಜ್ಯದಲ್ಲಿ ನಾವು ಏನು ಮಾಡಿದರು ನಡೆಯುತ್ತದೆ ಎಂಬ ನಿರ್ಧಾರ ಮುಸ್ಲಿಂರು ಬಂದಿದ್ದಾರೆ. ಯಾವುದೇ ಭಯದ ವಾತಾವರಣ ರಾಜ್ಯದಲ್ಲಿ ಇಲ್ಲ ಎಂದರು.

ಪಿ ಎಫ್ ಐ ಮೇಲಿನ ಕೇಸ್ ವಾಪಸ್ ಪಡೆದುಕೊಂಡಿದ್ದು ಮಂಗಳೂರು ಬೆಂಗಳೂರು ಶಿವಮೊಗ್ಗ‌ ಮುಂತಾದ ಕಡೆಗಳಲ್ಲಿ ಹಾಕಿದ ಕೇಸ್ ವಾಪಸು ಪಡೆದರು. ಹಳೆ ಹುಬ್ಬಳ್ಳಿ ಗಲಭೆ, ಡಿಜೆ ಹಳ್ಳಿ ಕೆಜೆ ಹಳ್ಳಿ, ಮೈಸೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಆದ ಪ್ರಕರಣದ ಕೇಸ್ ವಾಪಸು ಪಡೆಯಲಾಯಿತು. ಹಳೆ ಹುಬ್ಬಳ್ಳಿಯ ಅಂದಿನ ಪ್ರಕರಣವನ್ನ ಅಂದಿನ ಪೊಲೀಸ್ ಕಮೀಷನರ್ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು.
ಅಂದಿನ ಪ್ರಕರಣ ವಾಪಸು ಪಡೆಯಲು ಆಗಲ್ಲ. ಕಾನೂನು ಬಾಹಿರವಾಗಿ ವಾಪಾಸು ಪಡೆದರು.ಇದನ್ನ‌ ಕ್ಯಾಬಿನೆಟ್ ಗೆ ತೆಗೆದುಕೊಂಡು ಹೋಗಿ ಪ್ರಕರಣ ವಾಪಾಸು ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾಚೀಕೆ ಇಲ್ಲ ಇದೊಂದು ಮಾನ‌ಮಾರ್ಯದೆ ಇಲ್ಲದ ಸರ್ಕಾರ ಆಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಯಾವುದೇ ಮಟ್ಟಕ್ಕೆ ಹೋಗಲು‌ ಸಿದ್ಧರಾಮಯ್ಯಾ ಸರ್ಕಾರ ತಯಾರಿದೆ ಎಂದರು.

ಸಿದ್ದರಾಮನವರು ಪಾಕಿಸ್ತಾನ‌ ಮೇಲೆ ಯುದ್ಧ ಬೇಡಾ ಎಂಬ ಹೇಳಿಕೆ ಕೊಟ್ಟಿದ್ದು. ಇದರಿಂದ ಇನ್ನಷ್ಟು ಮುಸ್ಲಿಮರಿಗೆ ಸಪೂರ್ಟ್ ಮಾಡಿದ ಹಾಗೇ ಆಗಿದೆ. ರಾಜ್ಯ ಸರ್ಕಾರದ ನಡಾವಳಿಗಳು ದಿನದಿಂದ ದಿನಕ್ಕೆ ಹದಗೆಡುತಾ ಇದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನ ಕೇಂದ್ರ ತನಿಖಾದಳಕ್ಕೆ ತನಿಖೆಗೆ ಕೊಡಬೇಕು. ಅಂದಾಗ ಮಾತ್ರ ಹಿಂದು ಕುಟುಂಬಕ್ಕೆ ಹಾಗೂ ಶೆಟ್ಟಿ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯ ಎಂದರು.
ಸುಹಾಸ್ ಶೆಟ್ಟಿ ಒಬ್ಬ ರೌಡಿ ಶೀಟರ್ ಎಂಬ ಸಿಎಂ ಹೇಳಿಕೆ ಬೇಜವಬ್ದಾರಿತನದು, ರೌಡಿ ಅಂದರೆ ಕೊಲೆ ಮಾಡಬಹುದಾ? ಅಂತಹ ರೌಡಿ ಶೀಟರ್ ಗೆ ರಕ್ಷಣೆ ಬೇಡವಾ? ಹಾಗಾದರೆ ರಾಜ್ಯದಲ್ಲಿ ಸಾಕಷ್ಟು ಜ‌ನ ರೌಡಿ ಶೀಟರ್ ಇದ್ದಾರೆ. ಇನ್ನುಳಿದ ರೌಡಿ ಶೀಟರ್ ಕೊಲೆ ಆದರೆ ನಡೆಯುತ್ತಿದಿಯೇ? ಯಾವುದೋ ಒಂದು ಮರ್ಡರ್ ಅಟೆಂಮಟ್ ಇರುತ್ತದೆ. ಅದರಲ್ಲಿ ಓರ್ವ ಬಾಗಿ ಆಗಿರುತ್ತಾನೆ ಅದೇ ಕೇಸ್ ಮುಂದುವರೆಸುವುದು ಸರಿಯಲ್ಲ. ಇದನ್ನ ಮರು ಪರಿಶೀಲನೆ ಆಗಬೇಕು ಎಂದರು.

ಜವಾಹರಲಾಲ್ ನೆಹರು ಇದ್ದಾಗ ಸಾಕಷ್ಟು ಪಾಕಿಸ್ತಾನಕ್ಕೆ ಒತ್ತು ಕೊಡಲಾಗಿತ್ತು. ಇನ್ನು ಸಿಂಧು ನದಿ ಒಪ್ಪಂದ 100 ರಲ್ಲಿ 80 ಪಾಕಿಸ್ತಾನಲ್ಲೆಯ 20 ಭಾರತಕ್ಕೆ ನೀರು ಕೊಡಬೇಕು ಅಂತೆ. ಇದು ಜವಾಹರಲಾಲ್ ನೆಹರು ಅವರು ಒಪ್ಪಂದ ಮಾಡಿಕೊಂಡರು. ಜಮ್ಮು ಕಾಶ್ಮೀರದಲ್ಲಿ ನರೇಂದ್ರ ಮೋದಿ ಅವರು ಪಿಎಂ ಆಗುವತನಕ 370 ಕಲಂ ತೆಗೆದು ಹಾಕಲಿಲ್ಲ. ಈಗ ಇಂದಿರಾ ಗಾಂಧಿ, ಜವಾಹರಲಾಲ್ ನೆಹರು, ರಾಜೀವ ಗಾಂಧಿ ಕಾಲದಲ್ಲಿ ಯಾಕೆ ಆಗಲಿಲ್ಲ. ಈಗ ಏನು ಒಂದು ಅನಿರೀಕ್ಷಿತ ಘಟನೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ . ಇದಕ್ಕೆ ನ್ಯಾಯ ಕೊಡಿಸಲಾಗುವುದು ಅಂತಾ. ಪ್ರತಿಯೊಂದು ಹಂತದಲ್ಲಿ ಟೀಕೆ ಸರಿಯಲ್ಲ ಎಂದರು.

ನಾವು ಪೀಲ್ಡ್ ಗೆ ಇಳದರೆ ಅಡ್ರೆಸೆ ಇರಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ಯಾರು ಬೇಡಾ ಅಂದಾರೆ ತಾವು ಒಂದು ಕುಟುಂಬದ ಸುಪರ್ದಿಯಲ್ಲಿ ಇದ್ದವರು. ಇದೊಂದು ಅಪ್ರಬುಧ್ಧ ಹೇಳಿಕೆ ಎಂದರು..

Related Articles

Leave a Reply

Your email address will not be published. Required fields are marked *

Back to top button