ಬಾಗಲಕೋಟೆ

ರಾಜಕೀಯ ನಾಯಕರಿಗೆ ಅಪಮೃತ್ಯು : ಕೋಡಿಮಠದ ಶ್ರೀ ಭವಿಷ್ಯ

ಬಾಗಲಕೋಟೆ : ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿಯವರೆಗೆ ಯಾವುದೇ ಬದಲಾವಣೆ ಆಗಲ್ಲ. ವಾಯು, ಭೂ, ಜಲ, ಅಗ್ನಿ ಸುನಾಮಿಗಳು ಸಂಭವಿಸಲಿವೆ. ಹಿಮಾಲಯದಲ್ಲಿ ಸುನಾಮಿ ಆಗುತ್ತೆ, ಅಲ್ಲಿಂದ ಅದು ಡೆಲ್ಲಿಗೆ ಬರುತ್ತದೆ. ಜಗತ್ತಿನ ಎರಡು ‌ಮೂರು ಜನ ಮಹಾನ್ ರಾಜಕೀಯ ನಾಯಕರಿಗೆ ಅಪಮೃತ್ಯುವಿದೆ (ಅಕಾಲಿಕ ಸಾವು) ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಅವರು ನವನಗರದ ಸೆಕ್ಟರ್ ನಂಬರ್ 25ರಲ್ಲಿ‌ ಕೃಷಿಯೇತರ ಪತ್ತಿನ‌ ಸಹಕಾರಿ ಸಂಘದ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ ಬಳಿಕ ಮಾಧ್ಯಮವರೊಂದಿಗೆ ಅವರು ಮಾತನಾಡಿದರು.

ಸದ್ಯದಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವ ತೊಂದರೆಯೂ ಆಗಲ್ಲ. ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ರೀತಿಯ ಭವಿಷ್ಯ ಹೇಳುತ್ತಾರೆ. ಒಂದು ಯುಗಾದಿ ಭವಿಷ್ಯ, ಇನ್ನೊಂದು ಸಂಕ್ರಾಂತಿ ಭವಿಷ್ಯ. ಯುಗಾದಿದಲ್ಲಿ ಹೇಳುವುದು ಮಳೆ, ಬೆಳೆ, ಕೊರತೆ, ತಾಪತ್ರಯಗಳು ಹಾಗೂ ಪ್ರಕೃತಿ ದೋಷಕ್ಕೆ ಸಂಬಂಧಿಸಿರುವುದು. ಸಂಕ್ರಾಂತಿಯಲ್ಲಿ ಹೇಳುವುದು, ರಾಜರಿಗೆ ಹಾಗೂ ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ ಹೇಳುತ್ತೇವೆ. ಈ ಸಂಕ್ರಾಂತಿವರೆಗೆ ರಾಜಕೀಯ ಭವಿಷ್ಯವನ್ನು ನಾನು ನೋಡಿಲ್ಲ. ಅಲ್ಲಿಯವರೆಗೆ ರಾಜಕೀಯದಲ್ಲಿ ಏನೂ ಆಗಲ್ಲ ಎಂದರು.

ಪಹಲ್ಗಾಮ್ ದಾಳಿಯ ಕುರಿತು ಮಾತನಾಡಿದ ಅವರು, ಯುಗಾದಿ ಸಮಯದಲ್ಲಿ ನಾನು ಮೊದಲೇ ಹೇಳಿದ್ದೆ. ಉತ್ತರದ ನಾಡಿನಲ್ಲಿ ಹಬ್ಬಿತೂ ಹಗೆಯ ಬೇಗೆ. ಸುತ್ತುವರಿದು ಬರುವಾಗ ಜಗವೆಲ್ಲ ಕೂಳಾದೀತು ಎಂದು ಹೇಳಿದ್ದೆ. ನಾನು ಹೀಗೆ ಹೇಳಿದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಹಗೆಯಾಯಿತು. ನಂತರ ಅದು ಭಾರತವನ್ನು ವ್ಯಾಪಿಸಿತು. ನಂತರ ಅದು ಜಗತ್ತಿನವರೆಗೂ ಹಬ್ಬಿತು ಎಂದು ಹೇಳಿದರು.

ಈ ವರ್ಷದಲ್ಲಿ ಮಾತಾಂಧತೆ ಹೆಚ್ಚಾಗುತ್ತದೆ. ಅದರಿಂದ ಒಂದು ದೊಡ್ಡ ಕಾಯಿಲೆ ಬರುತ್ತೆ. ಐದು ವರ್ಷ ಇರುತ್ತೆ, ಶಾಂತಿ ಇಲ್ಲ, ನೆಮ್ಮದಿ ಇಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಏನಾದ್ರು ಬದಲಾವಣೆ ಆಗುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಅರಸನ ಮನೆಗೆ ಕಾರ್ಮೋಡ ಕವಿದಿತ್ತು ಎಂದು ಭವಿಷ್ಯ ನುಡಿದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button