ಬೆಂಗಳೂರು
ಸೋನು ನಿಗಮ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

ಕನ್ನಡಿಗರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಠಿಣ ಕ್ರಮ ಜರುಗಿಸಿದ್ದು, ಸೋನು ನಿಗಮ್ ಪಾಲ್ಗೊಳ್ಳದಂತೆ ನಿರ್ಧರಿಸಲಾಗಿದೆ.
ಈ ಬಗ್ಗೆ ಸೋಮವಾರ ನಗರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಚಿತ್ರರಂಗದಲ್ಲಿ ಕಲಾವಿದರನ್ನು ನಿಷೇಧ ಮಾಡುವಂತಿಲ್ಲ. ಆದರೆ, ಸ್ವಯಂ ಪ್ರೇರಣೆಯಿಂದ ನಿರ್ಮಾಪಕರು, ಸಂಗೀತ ನಿರ್ದೇಶಕರು ಗಾಯಕರನ್ನು ದೂರ ಇಡಬಹುದು. ಕಲಾವಿದರಾಗಲಿ,ಗಾಯಕರನ್ನಾಗಲಿ ಅಧಿಕೃತವಾಗಿ ನಿಷೇಧ ಮಾಡುವ ಅಧಿಕಾರ ವಾಣಿಜ್ಯ ಮಂಡಳಿಗೆ ಇರುವುದಿಲ್ಲ. ಗಾಯಕನನ್ನು ಕೆಲವು ವರ್ಷ ದೂರವಿಟ್ಟು, ಯಾರೂ ಅವಕಾಶ ಕೊಡದೆ ಬುದ್ಧಿ ಕಳುಹಿಸಬಹುದು ಎಂದುನರಸಿಂಹಲು ಹೇಳಿದರು.