
ಸವದತ್ತಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಒದಗಿಸುವುದಕ್ಕಾಗಿ ಮೇ 5 ರಿಂದ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ–2025 ನಡೆಯಲಿದೆ. ಈ ಸಮೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಗಣತಿ ನಡೆಯಲಿದೆ. ಈ ಗಣತಿಯ ಮೂಲಕ ಉಪಜಾತಿಗಳು, ಅವುಗಳ ಜನಸಂಖ್ಯೆ, ಆರ್ಥಿಕ ಸ್ಥಿತಿಗತಿ, ಉದ್ಯೋಗ, ಭೂಮಾಲೀಕತ್ವ ಇತ್ಯಾದಿ ಮಾಹಿತಿಗಳನ್ನೂ ಕಲೆಹಾಕಲಾಗುತ್ತದೆ. ಎಲ್ಲ ದತ್ತಾಂಶಗಳನ್ನು ಸಂಗ್ರಹಿಸಿದ ಬಳಿಕ ವಿಶ್ಲೇಷಣೆ ಮಾಡಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಒಳಮೀಸಲು ಒದಗಿಸುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ್, ಸಮಾಜ ಕಲ್ಯಾಣ ಅಧಿಕಾರಿ ಶ್ರೀ ಆರ್ ಆರ್ ಕುಲಕರ್ಣಿ, ಸವದತ್ತಿ ಪುರಸಭೆ ಮುಖ್ಯಅಧಿಕಾರಿ ಶ್ರೀ ಸಂಗಮೇಶ್ ಗದಗಿನಮಠ ಸೇರಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.