7 ವರ್ಷದಿಂದ ಬಸ್ ಸೇವೆ ಸ್ಥಗಿತ..!!! ಗೋವಿಂದಕೊಪ್ಪ ಗ್ರಾಮಸ್ಥರ ಪರದಾಟ…

ಬಾಗಲಕೋಟೆ: ಈ ಗ್ರಾಮಕ್ಕೆ 2019 ರಲ್ಲಿ ನೂತನವಾಗಿ ಬಸ್ ಸೇವೆ ಆರಂಭಿಸಿದ ಮೇಲೆ ಕೇವಲ ಕೆಲ ತಿಂಗಳುಗಳ ಕಾಲ ಮಾತ್ರ ಸಂಚರಿಸಿದ ಬಸ್ ತಿರುಗಿ ಇಲ್ಲಿಯ ವರೆಗೂ ಗ್ರಾಮಕ್ಕೆ ಬಂದಿಲ್ಲ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ.
ಹೌದು, ಬಾಗಲಕೋಟೆ ಜಿಲ್ಲೆಯ ಗೋವಿಂದಕೊಪ್ಪ ಗ್ರಾಮದಲ್ಲಿ 2019 ರಲ್ಲಿ ನೂತನವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆಯನ್ನು ಆರಂಭಿಸಲಾಗಿತ್ತು. ಆ ನಂತರ ಗ್ರಾಮದಲ್ಲಿ ಕೇಲವೆ ತಿಂಗಳುಗಳ ಕಾಲ ಮಾತ್ರ ಈ ಬಸ್ ಸಂಚರಿಸಿತು. ತದ ನಂತರ ಇಲ್ಲಿಯ ವರೆಗೂ ನೇರವಾಗಿ ಗೋವಿಂದಕೊಪ್ಪ ಗ್ರಾಮಕ್ಕೆ ಬಸ್ ಸೇವೆ ಸಿಗದೇ ಇಲ್ಲಿನ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ.
ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿನಿತ್ಯ ಸುಮಾರು ಮೂರ್ನಾಲ್ಕು ಕಿಲೋ ಮೀಟರ್ ವರೆಗೂ ನಡೆದುಕೊಂಡೆ ಸಾಗಿ ನಂತರ ಬೇರೆಡೆಯಿಂದ ಬಸ್ ಹತ್ತಬೇಕಾಗಿದೆ. ಅಲ್ಲದೇ ಗ್ರಾಮದ ಮಹಿಳೆಯರು ಮತ್ತು ವೃದ್ಧರಿಗೂ ಕೂಡ ತೀವ್ರ ತೊಂದರೆಯುಂಟಾಗುತ್ತಿದೆ. ಸಾಕಷ್ಟು ಬಾರಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಕ್ಯಾರೆ ಎನ್ನುತ್ತಿಲ್ಲ ಎಂಬ ಆರೋಪ ಜನರಿಂದ ಕೇಳಿ ಬಂದಿದೆ.