ಶಕ್ತಿ ಯೋಜನೆ ಬಂದ್ ಆಗಲಿ…ಆಪ್ ಆಧಾರಿತ ಪ್ರಯಾಣಿಕ ಸೇವೆಗೆ ಅವಕಾಶ ನೀಡದಿರಿ..

ಬೆಳಗಾವಿಯಲ್ಲಿ ಹೊಸ ಆ್ಯಪಗಳ ಮೂಲಕ ಮೋಟಾರ್ ಸೈಕಲ್ ಪ್ರಯಾಣಿಕ ಸೇವೆಗೆ ಅವಕಾಶ ನೀಡದಂತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು ಬೆಳಗಾವಿ ನಗರದಲ್ಲಿ ಆಟೋ ಚಾಲಕರನ್ನು ಗುರಿಯಾಗಿಸಿ ಹೊಸ ಆ್ಯಪಗಳು ಬಂದು ಆಟೋ ಚಾಲಕರ ಭವಿಷ್ಯಕ್ಕೆ ಕುತ್ತು ತರುವ ತೀವ್ರ ಪ್ರಯತ್ನ ನಡೆದಿದ್ದು ಅದನ್ನು ತಡೆಹಿಡಿಯಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇಂದು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಈಗಾಗಲೇ ಸರಕಾರದ ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಬಾಡಿಗೆಯಿಲ್ಲದೇ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಹೊಸ ಆಟೋ ಖರೀದಿಸಿದವರು ಲೋನ ಕಂತು ತುಂಬಲಾರದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಗಾವಿ ನಗರದಲ್ಲಿ ಸುಮಾರು 10 ಸಾವಿರ ಆಟೋ ರೀಕ್ಷಾಗಳು ನಿರಂತರ ಸಾರ್ವಜನಿಕ ಸೇವೆಯಲ್ಲಿ ತೊಡಗಿವೆ. ಈಗಿರುವ ಜನ ಸಂಖ್ಯೆ ಆಧಾರ ಪ್ರಕಾರ ಈಗಿರುವ ವಾಹನಗಳು ಹೆಚ್ಚಾಗಿದ್ದಾವೆ. ಮತ್ತು ಇವುಗಳಿಗೆ ಬಾಡಿಗೆ ಇಲ್ಲದಾಗಿದೆ. ಹೀಗೆ ಆಟೋಗಳಿಗೆ ಬಾಡಿಗೆ ಇಲ್ಲದಿರುವ ಸಮಯದಲ್ಲಿ ಓಲಾ ಮತ್ತು ಉಬರ, ಚಿಗ್ಯೂ, ಲ್ಯಾಬಿಟ್, ಯಾತ್ರಿ ಹಾಗೂ ಇತರೇ ಸಂಸ್ಥೆಯವರು ಆ್ಯಪ್ ಮೂಲಕ ಮುಗ್ಧ ಆಟೋ ಚಾಲಕರನ್ನು ಗುರಿಯಾಗಿಸಿಕೊಂಡು ಬಾಡಿಗೆ ಹೊಡೆಯಲು ತಯಾರಿ ನಡೆಸಿದ್ದು, ಕಾರಣ ಇಂತಹ ಸಂಕಷ್ಟದ ಸಮಯದಲ್ಲಿ ತಾವು ಆಟೋ ಚಾಲಕರ ನೆರವಿಗೆ ಬಂದು, ಯಾವುದೇ ಆ್ಯಪ್‌ಗಳಗೆ ಪರವಾನಿಗೆ ನೀಡಬಾರದು.
ಒಂದು ವೇಳೆ ಇವುಗಳಿಗೆ ಅನುಮತಿ ದೊರೆತರೇ ಭವಿಷ್ಯದಲ್ಲಿ ಈ ಕಂಪನಿಗಳು ಆಟೋ ಚಾಲಕರ ಸಂಪೂರ್ಣ ಹಿಡಿತವನ್ನು ಸಾಧಿಸಿ, ಆಟೋ ಚಾಲಕರ ಬದುಕನ್ನು ಇನ್ನಷ್ಟು ದುಸ್ತರಗೊಳಿಸುತ್ತವೆ. ಆದ್ದರಿಂದ ಬೆಳಗಾವಿ ನಗರದಲ್ಲಿ ಈ ಆಪ್’ಗಳು ಬರದಂತೆ ತಡೆಹಿಡಿಯಬೇಕು. ಸ್ಮಾರ್ಟ ಸಿಟಿ ಯೋಜನೆಯಡಿ ಮತ್ತು ಮಹಾನಗರ ಚಾಲಕ ಸಹಯೋಗದಲ್ಲಿ ಸುಮಾರು 40 ಆಟೋ ನಿಲ್ದಾಣ ನಿರ್ಮಿಸಿಕೊಡಬೇಕು. ಮತ್ತು ಇಲೆಕ್ಟ್ರಿಕ್ ಆಟೋ ರಿಕ್ಷಾಗಳಗೆ ಪರ್ಮಿಟ್ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಕುರಿತಾದ ಮನವಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯಾ ಮಠಪತಿ, ಪ್ರಧಾನ ಕಾರ್ಯದರ್ಶಿ ಜೀವನ ಉತ್ಕುರಿ, ಉಪಾಧ್ಯಕ್ಷ ಬಸವರಾಜ್ ಅವರಳ್ಳಿ, ಬಾಬಾಜಾನ್ ಬಳಗಾನೂರ, ಮನ್ಸೂರ್ ಹೊನಗೇಕರ ಇನ್ನುಳಿದವರು ಭಾಗಿಯಾಗಿದ್ಧರು.