Uncategorizedಬೆಳಗಾವಿರಾಜಕೀಯರಾಜ್ಯ
ಮಹಾನಗರ ಪಾಲಿಕೆ ಆಯುಕ್ತಅಶೋಕ ದುಡಗುಂಟಿ ವರ್ಗಾವಣೆ , ಶುಭಾ ಬಿ. ಪಾಲಿಕೆಯ ಆಯುಕ್ತರಾಗಿ ನೇಮಿಸಿ ಆದೇಶ

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಬೆಳಗಾವಿಯ ನೂತನ ಮಹಾಪಾಲಿಕೆ ಆಯುಕ್ತರಾಗಿ ಶುಭಾ ಬಿ. ಅವರನ್ನು ನೇಮಿಸಿ ಸರ್ಕಾರ ಆದೇಶವನ್ನು ಹೊರಡಿಸಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರನ್ನು ಸರ್ಕಾರವು ಯಾವುದೇ ಪೋಸ್ಟಿಂಗ್ ನೀಡದೇ, ವರ್ಗಾವಣೆ ಮಾಡಿದೆ.
ಮೈಸೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶುಭಾ ಬಿ. ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ನೇಮಿಸಿ ಆದೇಶವನ್ನು ಹೊರಡಿಸಿದೆ.