Uncategorized

ಖಾನಾಪೂರ ತಾಲೂಕಿನಲ್ಲಿ ಆನೆಯ ಹಾವಳಿ

ಖಾನಾಪೂರ ತಾಲೂಕಿನಲ್ಲಿ ಆನೆಯ ಹಾವಳಿ

ಖಾನಾಪೂರ ತಾಲೂಕಿನಲ್ಲಿ ಆನೆಯ ಹಾವಳಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಸುಗ್ಗಿಯ ಸಮಯದಲ್ಲಿ ಭತ್ತದ ಬೆಳೆ ಕಟಾವು ಮಾಡಿ ರಾಶಿ ಮಾಡುವ ಸಂದರ್ಭದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಖಾನಾಪೂರ ತಾಲೂಕಿನಲ್ಲಿ ನಿರ್ಮಾಣವಾಗಿದೆ.ಕಬ್ಬು ಬೆಳೆಗಾರರ ಪರಿಸ್ಥಿತಿ ಕೂಡಾ ಇದರ ಹೊರತಾಗಿಲ್ಲ ಇದರ ಪರಿಸ್ಥಿತಿಯಲ್ಲಿ ರೈತರು ಆತಂಕದಲ್ಲಿದ್ದಾರೆ.
ಈ ಮೊದಲು ಕೂಡಾ ಆನೆಯ ಆಗಮನದಿಂದ ತಾಲೂಕಿನ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಳಗ್ಗೆಯಿಂದಲೇ ಅವರೊಳ್ಳಿ ರುದ್ರಸ್ವಾಮಿ ಮಠದಿಂದ ಕೊಡಚವಾಡ ಪ್ರದೇಶದಲ್ಲಿ ಆನೆ ಆಗಮಿಸಿದ ಹಿನ್ನೆಲೆಯಲ್ಲಿ ರೈತರಲ್ಲಿ ಆತಂಕ ನಿರ್ಮಾಣವಾಗಿದೆ.
ಇದರ ಬಗ್ಗೆ ಶಾಸಕ ವಿಠ್ಠಲ ಹಲಗೇಕರ ಅವರು ರಾಜ್ಯ ಅರಣ್ಯ ಇಲಾಖೆಯ ನಿರ್ದೇಶಕರಿಗೆ ಖಾನಾಪೂರ ತಾಲೂಕಿನಲ್ಲಿ ಆನೆ ಆಗಮಿಸುತ್ತಿರುವ ಬಗ್ಗೆ ಗಮನಕ್ಕೆ ತಂದು ಯೋಗ್ಯ ರೀತಿಯ ವ್ಯವಸ್ಥೆ ಮಾಡಿ ಎಂದು ಮನವಿ ಸಲ್ಲಿಕೆ ಮಾಡಿದರೂ ಕೂಡ ಅರಣ್ಯ ಇಲಾಖೆಯಿಂದ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಮೇಲ್ನೋಟಕ್ಕೆ ಎಂದು ಕಾಣುತ್ತದೆ.

Related Articles

Leave a Reply

Your email address will not be published. Required fields are marked *

Back to top button