
ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಬೇನಾಡಿ ಹುನ್ನರಗಿ ರಸ್ತೆಯಲ್ಲಿ ಬರುವ ಅಜೀತರಾವ ಆನಂದರಾವ ಪಾಟೀಲ ಇವರ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಿಪ್ ಪೈಪ್ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಅಜಿತರಾವ್ ಪಾಟೀಲ ಎಂಬುವವರ ಜಮೀನಿನಲ್ಲಿ ಫಿಲ್ಟರ್ ಹೌಸ್ ನಲ್ಲಿ 14 ಎಕರೆಗೆ ಸಾಕಾಗುವಷ್ಟು ಡ್ರಿಪ್ ಪೈಪ್ ಗಳನ್ನು ತೆಗೆದು ಸಂಗ್ರಹಿಸಿದ್ದರು. ರಾತ್ರಿ 9 ರಿಂದ 9:30 ರ ನಡುವೆ ಟ್ರಿಪ್ ಪೈಪ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಇಡೀ ಪೈಪ್ ಗಳು ಸುಟ್ಟು ಕರಕಲಾಗಿದೆ. ಬೆಂಕಿ ವೇಗವು ತೀವ್ರವಾಗುತ್ತಿದಂತೆ, ಗ್ರಾಮಸ್ಥರು ನಿಪ್ಪಾಣಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಬಳಿಕ ಅಗ್ನಿಶಾಮಕ ದಳದ ವಾಹನ ಬರುವಷ್ಟರಲ್ಲಿ ಪೈಪ್ ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.