ಬೆಳಗಾವಿ

ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ; ಹುಕ್ಕೇರಿ ಹಿರೇಮಠದ ಸ್ವಾಮೀಜಿ.

ಬೆಳಗಾವಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ದ ದಾಳಿಯನ್ನು ಖಂಡಿಸುವುದು, ಮಂಡಿಸುವುದು ಆಗುವುದು ಬೇಡ ದಂಡಿಸುವ ಕೆಲಸವಾಗಬೇಕೆಂದು ಹೇಳಿದ್ದೆ. ಈಗ ನಮ್ಮ‌ ಹೆಮ್ಮೆಯ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಬಹುಶಃ ಇವತ್ತು ನನ್ನ ಹೆಮ್ಮೆಯ ಭಾರತದ ಸೇನೆ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದೆ. ಭಯೋತ್ಪಾದಕರನ್ನು ಬೆಂಬಲಿಸುವ ಪಾಕಿಸ್ತಾನದ ಅಲ್ಲಿಯ ಸೇನೆಯು ಅರ್ಥೈಸಿಕೊಳ್ಳಬೇಕು. ಮುಂದೊಂದು ದಿನ ಹೀಗೆ ಆದರೆ ನಿಮಗೂ ಕೂಡ ಅಪಾಯ ತಪ್ಪಿದ್ದಲ್ಲ. ನಾವೆಲ್ಲರೂ ಉಗ್ರಗಾಮಿಗಳ ವಿರುದ್ಧ ಹೋರಾಡಬೇಕು. ಅಷ್ಟೇ ಅಲ್ಲದೆ ತಕ್ಕ ಶಾಸ್ತಿ ಮಾಡಬೇಕು. ಆಪರೇಷನ್ ಸಿಂಧೂರ್ ಬಹಳಷ್ಟು ಮಹಿಳೆಯರ ಕುಂಕುಮವನ್ನು ಅಳಿಸಿದವರಿಗೆ ತಕ್ಕ ಪಾಠ ಕಲಿಸಿದೆ. ಅದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ‌. ನಾವೇಲ್ಲರೂ ದೇಶಕ್ಕಾಗಿ ಒಂದಾಗೋಣ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

Related Articles

Leave a Reply

Your email address will not be published. Required fields are marked *

Back to top button