ಅಂತರಾಷ್ಟ್ರೀಯ

ಮಧ್ಯರಾತ್ರಿ ದಾಳಿ, 23 ನಿಮಿಷದಲ್ಲೇ 70 ಉಗ್ರರು ಮೃತ; ; ಕರ್ನಲ್ ಸೋಫಿಯಾ ಕುರೈಶಿ

ಪೆಹಲ್’ಗಾಮ್’ನಲ್ಲಿ ಭಾರತೀಯರನ್ನು ಹತ್ಯೆ ಮಾಡಿದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರನ ಮೂಲಕ ಭಾರತೀಯ ಸೇನೆಯೂ ಮಧ್ಯರಾತ್ರಿ ದಾಳಿಯನ್ನು ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ.

ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ’ ಆರಂಭಿಸಿವೆ. ಈ ಆಪರೇಷನ್ ಸಿಂಧೂರಗೆ ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕೇವಲ 23 ನಿಮಿಷದಲ್ಲಿ ಪಾಕ್ನ 9 ನೆಲೆಯನ್ನು ಉಡೀಸ್ ಮಾಡಿದೆ. ಕೇವಲ 23 ನಿಮಿಷದಲ್ಲೇ 70 ಉಗ್ರರು ಮೃತಪಟ್ಟಿದ್ದಾರೆ. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ 5 ಸ್ಥಳ ಮತ್ತು ಪಾಕ್ನ ನಾಲ್ಕು ಸ್ಥಳ ಸೇರಿ ಉಗ್ರರ ನೆಲೆ, ಟ್ರೆನಿಂಗ್ ಕ್ಯಾಂಪ್ಗಳ ಮೇಲೆ ಏಕಕಾಲದಲ್ಲಿ 9 ಕಡೆಯಲ್ಲಿ ದಾಳಿ ಮಾಡಿ ಹೊಡೆದುರುಳಿಸಿದೆ. ಇದರಲ್ಲಿ‌ ಈ ಮೂಲಕ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿದೆ.

ಈ ಕುರಿತು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಕುರೈಶಿ ಅವರು ಮಾಹಿತಿಯನ್ನು ನೀಡಿದ್ದು, ಕಳೆದ ತಿಂಗಳು ಏಪ್ರಿಲ್ 22 ರಂದು ಕಾಶ್ಮೀರದ ಅನಂತನಾಗ ತಾಲೂಕಿನ ಪೆಹಲ್’ಗಾಮ್’ನಲ್ಲಿ ಭಾರತೀಯರನ್ನು ಹತ್ಯೆ ಮಾಡಿದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರನ ಮೂಲಕ ಭಾರತೀಯ ಸೇನೆಯೂ ಮಧ್ಯರಾತ್ರಿ ದಾಳಿಯನ್ನು ನಡೆಸಿದೆ. 9 ಉಗ್ರರ ನೆಲೆಗಳನ್ನು ಭಾರತೀಯ ಸೇನೆಯೂ ಧ್ವಂಸಗೊಳಿಸಿದೆ. ಪಾಕಿಸ್ತಾನವು 3 ದಶಕಗಳಿಂದ ಉಗ್ರವಾದಿಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಂಗ್ ಕಮಾಂಡರ್ ರೋಮಿಕಾ ಸಿಂಗ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Leave a Reply

Your email address will not be published. Required fields are marked *

Back to top button