ಬೆಳಗಾವಿ
“ನಿಮಗೆ ನೈತಿಕತೆ ಇದ್ದರೆ ಕುಟುಂಬ ಸಮೇತ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬಂದು ಆಣೆ ಮಾಡಿ”: ಓಪನ್ ಚಾಲೆಂಜ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸದನದಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಳಸಿದ್ದಾರೆ ಎನ್ನುವ ಅವಾಚ್ಯ ಪದಗಳ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸವಾಲೊಂದನ್ನು ನಿನ್ನೆ ಮಂಗಳವಾರ ಬಹಿರಂಗವಾಗಿ ನಿಡಿದ್ದಾರೆ “ನಿಮಗೆ ನೈತಿಕತೆ ಇದ್ದರೆ ಕುಟುಂಬ ಸಮೇತ ಧರ್ಮಸ್ಥಳದ ಸನ್ನಿಧಿಗೆ ಬಂದು ಆಣೆ ಪ್ರಮಾಣ ಮಾಡಿ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ.
ನೀವು ದೇವರನ್ನ ಹೆಚ್ಚು ನಂಬ್ತಿರಾ, ದತ್ತ ಮಾಲೆ ದರಿಸುತ್ತಿರಿ ನಿಮಗೆ ಚಿಕ್ಕಮಗಳೂರಿನಿಂದ ಧರ್ಮಸ್ಥಳ ತುಂಬಾ ಸಮೀಪ. ನಾನು ಬಹಳ ನಂಬುವ ದೇವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬಂದು ರಾಜ್ಯದ ಜನತೆ ಎದುರು ನೀವು ಆ ಪದಗಳ ಬಳಕೆ ಮಾಡಿಲ್ಲವೆಂದು ಆಣೆ ಮಾಡಿ ಸಾಬಿತು ಮಾಡಿಕೊಳ್ಳಿ ಎಂದು ಕುಟುಕಿದರು.
ನೀವು ಸತ್ಯವಂತರು, ಶ್ರೀರಾಮಚಂದ್ರನ ಭಕ್ತರು, ಧರ್ಮನಿಷ್ಟರು. ಆಡಿದ ಮಾತು, ಆಡದ ಮಾತು ಎಂದು ಪಟಾಕಿ ಸಿಡಿಸಿ, ಮೆರವಣಿಗೆ ನಡೆಸಿ, ಸಂಭ್ರಮಿಸುತ್ತಿರುವವರು ಯಾರು ಎಂಧು ಗುಡುಗಿದರು.