
ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕ ರಾಜೀನಾಮೆ ಯತ್ನಾಳ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯ್ಯೂಟರ್ನ್ ಹೊಡೆದಿದ್ದಾರೆ.ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಸೀರೆ ಹಾಗೂ ಬಳೆ ಗಿಫ್ಟ್ ಆಗಿ ನೀಡಿ ಟಾಂಗ್ ನೀಡಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ಎಂ.ಸಿ.ಮುಲ್ಲಾ, ಡಾ.ರವಿ ಬಿರಾದಾರ, ನಾಗರಾಜ ಲಂಬು ಹಾಗೂ ಫಯಾಜ್ ಕಲಾದಗಿ ಉಪಸ್ಥಿತರಿದ್ದ ಸುದ್ದಿಗೋಷ್ಠಿಯಲ್ಲಿ ಸೀರೆ ಉಟ್ಟುಕೊಂಡಾದ್ರೂ ಧೈರ್ಯ ಬರಲಿ, ಸೀರೆ ಕೊಡುವ ಮೂಲಕ ಮಹಿಳೆಯರಿಗೆ ಅವಮಾನ ಮಾಡುತ್ತಿಲ್ಲಾ ಎನ್ನೋ ಸಬೂಬು ಹೇಳಿದರು. ಶಾಸಕ ಯತ್ನಾಳ ಇಳಕಲ್ ಸೀರೆ ಉಟ್ಟುಕೊಂಡು ಧೈರ್ಯ ಮಾಡಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.