ಹಿಂದೆಂದಿಗಿಂತಲೂ ಈಗ ಭಾರತೀಯ ಸೇನಾಶಕ್ತಿ ಬಲಿಷ್ಠವಾಗಿದೆ; ಮಾಜಿ ಯೋಧ

ಬೆಳಗಾವಿ : ಹಿಂದೆಂದಿಗಿಂತಲೂ ಈಗ ಭಾರತೀಯ ಸೇನಾ ಶಕ್ತಿ ಬಲಿಷ್ಠ ವಾಗಿದ್ದು ಪಾಕಿಸ್ತಾನದ ಉಗ್ರರನ್ನು ಮತ್ತು ಉಗ್ರನೆಲೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕೆಂದು ಮಾಜಿ ಯೋಧ ಸುಬೇದಾರ್ ಪ್ರಕಾಶ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ನಿಪ್ಪಾಣಿ ತಾಲೂಕಿನ ಭೋಜವಾಡಿ ಗ್ರಾಮದ ಮಾಜಿ ಯೋಧ ಸುಬೇದಾರ ಪ್ರಕಾಶ ಪಾಟೀಲ ಇನ್ ನ್ಯೂಸ್ ವಾಹಿನಿಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಕಾಶ್ ಅವರು ಬೆಳಗಾವಿಯ ಎಂಎಲ್ಐಆರ್‌ಸಿ ಮೂಲಕ1988 ರಲ್ಲಿ ಭಾರತೀಯ ಸೇನೆಗೆ ಸೇರಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 12 ವರ್ಷ ಹಾಗೂ ಪಠಾನಕೋಟ್, ಗುಜರಾತ್, ಸಿಕ್ಕಿಂ ಸೇರಿ ಒಟ್ಟು 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ 2018 ರಲ್ಲಿ ನಿವೃತ್ತರಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದೊಂದಿಗಿನ ರಣರೋಚಕ ಕಾಳಗದ ಚಿತ್ರಣವನ್ನು ಅವರು ಬಿಚ್ಚಿಟ್ಟಿದ್ದು ಹೀಗೆ ,ಜಮ್ಮು ಕಾಶ್ಮೀರದ ಕುಪ್ವಾಡದಲ್ಲಿ 2006 ರಲ್ಲಿ ಉಗ್ರರು ನನ್ನ ಮೇಲೆ 30 ಗುಂಡಿನ ದಾಳಿ ನಡೆಸಿದ್ದರು.
ದೇಹದ ಕರಳು ಕಿತ್ತು ಹೊರಬರುವ ಜೊತೆಗೆ ನನ್ನ ಒಂದು ಕೈ ಕೂಡ ತುಂಡಾಗಿತ್ತು ಚಿಕಿತ್ಸೆ ಪಡೆದು ಗುಣಮುಖರಾಗುವ ಜೊತೆಗೆ ಮತ್ತೇ ಸೇನೆಯಲ್ಲಿ ಕೆಲಸ ಮಾಡಿದೆ. ಆಗ ಭಾರತೀಯ ಸೇನೆಗೆ ಅಷ್ಟೋಂದು ಸ್ವತಂತ್ರ ಇರಲಿಲ್ಲ, ಇಷ್ಟೋಂದು ಸೇನಾ ಸಮಗ್ರಿಯೂ ಇರಲಿಲ್ಲ ಈಗ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಸೇನಾ ಸಾಮಗ್ರಿಗಳು ಕೂಡ ಉತ್ಕೃಷ್ಟವಾಗಿವೆ, ಪಾಕಿಸ್ತಾನದ ಉಗ್ರರನ್ನು ಅವರ ಮೂಲ ನೆಲೆಗಳನ್ನು ನಾಶ ಮಾಡಬೇಕೆಂದು ಯೋಧ ಪ್ರಕಾಶ ತಮ್ಮ ಆಕ್ರೋಶ ಭರಿತ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ.