ಕೋಟಬಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಬಡವರ ಅಕ್ಕಿಗೆ ಕನ್ನಾ ಹಾಕುತ್ತಿರುವ ಚಂದ್ರು ಮರಡಿ

ಕೋಟಬಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಬಡವರ ಅಕ್ಕಿಗೆ ಕನ್ನಾ ಹಾಕುತ್ತಿರುವ ಚಂದ್ರು ಮರಡಿ
ಕೋಟಬಾಗಿ ಗ್ರಾಮದ ಚಂದ್ರು ಮರಡಿ ಎಂಬವರ ಮಾಲಿಕತ್ವದ ನ್ಯಾಯಬೆಲೆ ಅಂಗಡಿಯಲ್ಲಿ ಬಡ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ ಬಡ ಕುಟುಂಬಗಳ ಪಡಿತರಕ್ಕೆ ಕನ್ನ ಹಾಕುತ್ತಿರುವ ಈ ನ್ಯಾಯಬೆಲೆ ಅಂಗಡಿಯ ಮಾಲೀಕ ಚಂದ್ರು ಮರಡಿ.
ಎಂಬವರು ನ್ಯಾಯಬೆಲೆ ಅಂಗಡಿಯನ್ನು ಹೊಂದಿದ್ದು, ನ್ಯಾಯಬೆಲೆ ಅಂಗಡಿ ಹಾಕದೆ ತನ್ನ ಸ್ವಂತ ಮನೆಯಲ್ಲಿ ಕೊಡುತ್ತಾನೆ.
ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರ ಬಡವರಿಗೆ ನೀಡುವ ಅಕ್ಕಿಗೆ ಕನ್ನ ಹಾಕುವ ಮೂಲಕ ಬಡವರಿಗೆ ನೀಡುವ ಅಕ್ಕಿಯಲ್ಲಿ ಪ್ರತೀ ಪಡಿತರ ಚೀಟಿದಾರ ರಿಂದ ತಲಾ 2 ಕೆ.ಜಿ. ಅಕ್ಕಿಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದಾಗ ಅಲ್ಲಿಗೆ ವರದಿಗಾರರು ಹೋದ ಸಂದರ್ಭದಲ್ಲಿ ರಾಜಾರೋಷವಾಗಿ 2 ಕೆಜಿ ಲೂಟಿ ಮಾಡಿದ್ದು ಕಂಡು ಬಂದಿದೆ.
ಆ ವ್ಯಕ್ತಿ ಹೇಳುತ್ತಾನೆ ಎಪಿಎಂಸಿಯಿಂದ ಬರಬೇಕಾದರೆ ದಾರಿಯಲ್ಲಿ ಬಿದ್ದು ಹೋಗುತ್ತೆ ಕೆಳಕ್ಕೆ ಬಿದ್ದು ನಾಸಾಗಿರುವ ಅಕ್ಕಿ ಜನಗಳಿಗೆ ಕಮ್ಮಿ ಬೀಳುತ್ತೆ ಅದಕ್ಕೆ ಜನರಿಗೆ ಕಡಿಮೆ ಕೊಡುತ್ತೇನೆ ಎಂದು ಹೇಳುತ್ತಾನೆ.
ಈ ನ್ಯಾಯಬೆಲೆ ಅಂಗಡಿಗೆ ಆ ಊರಿನ ಪಡ್ಡಿತರ ಚೀಟಿ 1100 ಕಾಡುಗಳು ಇದ್ದಾವೆ ಈ ಕಾರ್ಡ್ಗಳ ಲೆಕ್ಕದ ಪ್ರಕಾರ ಪ್ರತಿ ಒಂದು ಕಾಡಿಗೆ 2 ಕೆ.ಜಿ ಹೊಡೆಯುತ್ತಾನೆ ಸರಾಸರಿ ಇವನ ಬಳಿ ಉಳಿಯುವ ಅಕ್ಕಿ 2200 ಕೆಜಿ ಅಕ್ಕಿ ಎಲ್ಲಿ ಹೋಯಿತು.
ಏನಾದರೂ ಕೇಳಿದರೆ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಹೇಳುತ್ತಾನೆ ಇವನಿಗೆ ರಾಜಕಾರಣಿಗಳು ಸಪೋರ್ಟಿ ಇದೆಯಾ ಅಥವಾ ಅಧಿಕಾರಿಗಳ ಸಪೋರ್ಟ್ ಇದೆಯಾ ಎಂಬುದು ತಿಳಿದು ಬಂದಿಲ್ಲಾ .
2 ಕೆಜಿ ಕದಿಯುತ್ತಿರುವ ಈ ಕತರ್ನಾಕ್ ಕಳ್ಳನ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರಾ ಅಥವಾ ಇವರ ಕೊಡು ಎಂಜಲ ಕಾಶಿಗೆ ಆಸೆಪಟ್ಟು ಬಡ ಕುಟುಂಬಗಳಿಗೆ ಮೋಸ ಮಾಡುತ್ತಾರೆ ಈ ಅಧಿಕಾರಿಗಳು ಎಂಬುದನ್ನು ಕಾದು ನೋಡೋಣ