
ಬೆಳಗಾವಿ: ಕೊಣ್ಣೂರ ಸೊಸೆ ಬಂದು ಮನೆ ಬೆಳಗಬೇಕು ಎನ್ನುವ ವಾಡಿಕೆ ಇದೆ. ಆದರೆ ನನ್ನ ಸೊಸೆ ಬಂದು ಇಡೀ ದೇಶವನ್ನೇ ಬೆಳಗಿದಳು ಎನ್ನುವುದಕ್ಕೆ ಕರ್ನಲ್ ಸೋಫಿಯಾ ಕುರೇಶಿ ನಮ್ಮ ಸೊಸೆ ಎನ್ನುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ ಎಂದು ಕರ್ನಲ್ ಸೋಫಿಯಾ ಕುರೇಶಿ ಮಾವ ಗೌಸಸಾಬ್ ಬಾಗೇವಾಡಿ ಹೇಳಿದರು.
ಶನಿವಾರ ಕೊಣ್ಣೂರನಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೊಣ್ಣೂರ ಮರಡಿಮಠದ ಶ್ರೀ ಡಾ. ಪವಾಡೇಶ್ವರ ಸ್ವಾಮೀಜಿಯವರು ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಜಾತಿಯಲ್ಲಿ ಮುಸ್ಲಿಮ್ ಇರಬಹುದು. ಆದರೆ ನಾನು ಮಠದ ಪರಿಸರದಲ್ಲಿ ನನಗೆ ಮಕ್ಕಳಾಗದ ಸಂದರ್ಭದಲ್ಲಿ ತವಗದ ಬಾಳಯ್ಯ ಆಶೀರ್ವಾದದಿಂದ ನನಗೆ ಮಕ್ಕಳಾದರು. ಅದೇ ಮಗ ಈಗ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ನಾವೆಲ್ಲರೂ ಕೂಡ ದೇಶ ಭಕ್ತರಾಗುವುದು ಅತ್ಯಾವಶ್ಯಕವಾಗಿದೆ ಎಂದರು.
ಬೆಳಗಾವಿ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತಕ್ಕೆ ಬೆಳಗಾವಿ ಜಿಲ್ಲೆ ಒಂದು ಕೊಡುಗೆಯನ್ನು ಕೊಟ್ಟಿದೆ ಎಂದು ನಿದರ್ಶನ. ನನ್ನ ಜಿಲ್ಲೆಯ ಸೊಸೆ ಸೋಫಿಯಾ ಕುರೇಶಿ ಆಪರೇಷನ್ ಸಿಂಧೂರ್ ನಡೆಸಿ ಇಡೀ ಪ್ರಪಂಚಕ್ಕೆ ಮಾಹಿತಿ ನೀಡಿದ್ದು ನನ್ನ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಾವೆಲ್ಲರೂ ಕೂಡ ಒಗ್ಗಟ್ಟಾಗಿ ಭಗವಂತನಲ್ಲಿ ಪ್ರಾರ್ಥಿಸೋಣ ನಮ್ಮ ಭಾರತದ ಎಲ್ಲ ಯೋಧರಿಗೆ ಶಕ್ತಿ ತುಂಬೋಣ ಎಂದರು.
ಕೊಣ್ಣೂರ ಮರಡಿಮಠದ ಡಾ. ಪವಾಡೇಶ್ವರ ಸ್ವಾಮೀಜಿ ಮಾತನಾಡಿ, ಇವತ್ತು ಹುಕ್ಕೇರಿ ಶ್ರೀಗಳು ಕೊಣ್ಣೂರ ಮರಡಿಮಠದವರೆಗೂ ಬಂದು ದೇಶ ಭಕ್ತ ಕುಟುಂಬಕ್ಕೆ ಸನ್ಮಾನಿಸಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು. ನಮ್ಮ ಸೋಫಿಯಾ ಕುರೇಶಿ ಅತ್ತೆ, ಮಾವನಿಗೆ ಹುಕ್ಕೇರಿ ಹಿರೇಮಠದ ಗೌರವ ಸಲ್ಲಿಸಿದರು ಎಂದರು.