
ರಾಜ್ಯ ಸರ್ಕಾರವು ಭಾರತೀಯ ಸೇನೆಗೆ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ. ಕೇಂದ್ರ ಸರ್ಕಾರದಿಂದ ಗೃಹ ಇಲಾಖೆಗೆ ಸಲಹೆ – ಸೂಚನೆಗಳನ್ನು ನೀಡಲಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ರಾಜ್ಯ ಸರ್ಕಾರ ಅವುಗಳನ್ನು ಪಾಲಿಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಯುದ್ಧಕ್ಕಾಗಿ ನಮ್ಮ ಭಾರತೀಯ ಸೇನೆಯೂ ಸಕಲ ಸಿದ್ಧತೆಯೊಂಗಿದೆ ಸನ್ನದ್ಧವಾಗಿದೆ. ಎಲ್ಲ ರಾಜ್ಯಗಳು ಒಕ್ಕಟ್ಟನ್ನು ಪ್ರದರ್ಶಿಸಿದ್ದು, ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸೇರಿ ಎಲ್ಲ ರಾಜ್ಯಗಳು ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿವೆ. ಯೋಧರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ಕಳೆದ ದಿನ ತಿರಂಗಾ ರ್ಯಾಲಿಯನ್ನು ಕೂಡ ನಡೆಸಿದೆ ಎಂದರು.
ಇನ್ನು ದೆಹಲಿಯಿಂದ ರಾಜ್ಯದ ಗೃಹ ಇಲಾಖೆಗೆ ಕೆಲ ಸಲಹೆ ಸೂಚನೆಗಳು ಬಂದಿವೆ. ಸಿಎಂ ಕುರಿತು ಮಾಹಿತಿ ನೀಡಿಲಿದ್ದು, ರಾಜ್ಯದ ಜಲಾಶಯಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಮುಂಜಾಗೃತೆಯನ್ನು ವಹಿಸಲಾಗುತ್ತಿದೆ ಎಂದರು.