
ನಿಪ್ಪಾಣಿ ತಾಲೂಕಿನ ರಾಹುಲ್ ಐಶ್ವರ್ಯಗೆ ಫೋನ್ ಕರೆ ಮಾಡಿದ್ದಕ್ಕೆ ಐಶ್ವರ್ಯ ಎಂಬ ಯುವತಿ ಬೆಳಗಾವಿ ನಗರದ ಹೊರ ವಲಯದಲ್ಲಿರುವ ಹೊನಗಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಐಶ್ವರ್ಯ ತಂದೆ ಶಿವಾಜಿ ಆರೋಪಿಸಿದ್ದಾರೆ.
ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಶಾಲೆ ರಜೆ ಇದ್ದ ಕಾರಣ ನನ್ನ ಸಹೋದರಿಯ ಮನವಿಗೆ ಐಶ್ವರ್ಯಳನ್ನು ಕಳುಹಿಸಿದ್ದೆ. ಆದರೆ ಐಶ್ವರ್ಯ ಗೆ ನಿಪ್ಪಾಣಿಯ ರಾಹುಲ್ ಕರೆ ಮಾಡಿದ ಹಿನ್ನೆಲೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಐಶ್ವರ್ಯ ಹಾಗೂ ರಾಹುಲ್ ಮೊಬೈಲ್ ತನಿಖೆ ಮಾಡಿದರೇ ಎಲ್ಲ ಸತ್ಯಾಸತ್ಯತೆ ಬಹಿರಂಗವಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಐಶ್ವರ್ಯ ಮರಣೋತ್ತರ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.