ಮಾನ್ವಿಗೆ ತಲುಪದ ಕಾಲುವೆ ನೀರು, ರೈತರಿಗೆ ಅನ್ಯಾಯ ಕೆಳ ಭಾಗದ ಜನರಿಗೆ ತಲುಪದ ನೀರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ

ಮಾನ್ವಿಗೆ ತಲುಪದ ಕಾಲುವೆ ನೀರು, ರೈತರಿಗೆ ಅನ್ಯಾಯ
ಕೆಳ ಭಾಗದ ಜನರಿಗೆ ತಲುಪದ ನೀರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ
ಏಪ್ರಿಲ್ 20ರವರೆಗೂ ನೀರು ಹರಿಸುವಂತೆ ಒತ್ತಾಯ
ನೀರು ಹರಿಸಿ ರೈತರಿಗೆ ನ್ಯಾಯ. ವಾಗುತ್ತೆ ಒದಗಿಸಿ
ಮಾನ್ವಿ ವಿಧಾನ ಸಭಾ ಕ್ಷೇತ್ರದ ಮಾನವಿ ತಾಲೂಕಿನ ಕೆಳ ಭಾಗದ ರೈತರಿಗೆ ಕಾಲುವೆ ನೀರು ಹರಿಸದ ಹಿನ್ನೆಲೆಯಲ್ಲಿ ತಬಾತೊಂದರೆಯಾಗಿದ್ದು,ಕೂಡಲೆ ಸರಕಾರ ಎಪ್ರೀಲ್ 20 ವರೆಗೂ ನೀರು ಹರಿಸುವ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಆರ್ ವಿ ಎನ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಡ್ಯಾಂನಲ್ಲಿ ನೀರಿದೆ ಆದರೆ ಕೆಳಭಾಗಕ್ಕೆ ನೀರು ಬಾರದ ಕಾರಣ ತಡವಾಗಿ ಮಾಡಿದ ಭತ್ತ ನಾಟಿ ಮಾಡಿದ ಬೆಳೆಗಾರರಿಗೆ ತೊಂದರೆಯಾಗುತ್ತದೆ. ಈ ಸಮಸ್ಯೆ ನಿವಾರಿಸಲು ಸ್ಥಳೀಯ ಶಾಸಕ ಜಿ. ಹಂಪಯ್ಯ ನಾಯಕರು ಕಾಳಜಿ ವಹಿಸಬೇಕು ಎಂದರು.
ನಾನು ಈ ಭಾಗದ ಶಾಸಕನಾಗಿದ್ದ ವೇಳೆ ನೀರು ಹರಿಸುವ ಕೆಲಸ ಅಂದು ಮಾಡಿದ್ದೇ.ಆದರೆ ರೈತರಿಗೆ ನೀರು ಬಿಡಿಸುವ ಕೆಲಸ ತಾವು ಮಾಡಿ ಎಂದು ನಮಗೆ ಮನವಿ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಮತ್ತು ಸಚಿವ ಎನ್.ಎಸ್.ಬೋಸರಾಜು ಅವರು ನೀರು ಬಿಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.