
ಬಾಗಲಕೋಟೆ: ಗುರಾಯಿಸಿ ನೋಡುವ ವಿಚಾರದಲ್ಲಿ ನಡೆದ ಪರಸ್ಪರ ಹಲ್ಲೆಯಲ್ಲಿ ಇಬ್ಬರೂ ಯುವಕರು ಗಂಭೀರ ಗಾಯಗೊಂಡ ಘಟನೆ ಬಾಗಲಕೋಟೆಯ ಪಂಕಾ ಮಸೀದಿ ಬಳಿ ನಡೆದಿದೆ.
ಬಾಗಲಕೋಟೆಯ ಪಂಕಾ ಮಸೀದಿ ಬಳಿ ಗುರಾಯಿಸಿ ನೋಡುವ ವಿಚಾರದಲ್ಲಿ ಅಲ್ತಾಫ್, ಸಂದೀಪ್ ಮತ್ತು ಸಚಿನ್ ಎಂಬುವರ ಮಧ್ಯೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆದಿದೆ. ನಂತರ ಪರಸ್ಪರ ಚಾಕು ಇರಿದುಕೊಂಡಿದ್ದಾರೆ. ಸಂದೀಪ್ ಮತ್ತು ಸಚಿನ್ ಎಂಬುವವರಿಂದ ಅಲ್ತಾಫ್ ಮೇಲೆ ಹಲ್ಲೆ ನಡೆಸಿ ಚಾಕು ಇರಿಯಲಾಗಿದೆ. ಇನ್ನು ಅಲ್ತಾಫ್ ಕೂಡ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಎಲ್ಲರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗಲಕೋಟೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.