
ಖಾನಾಪೂರ : ಖಾನಾಪೂರ ತಾಲೂಕು ಹಲಕರ್ಣಿ ಗ್ರಾಮದ 19 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪ್ರತೀಕ್ ರಾಜು ತುರಮುರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಖಾಸಬಾಗದ ದುರ್ಗಾದೇವಿ ಜಾತ್ರೆಗೆ ಹೋಗಿ ಬಂದು ಎದೆ ನೋವಿದೆ ಎಂದು ಕೆಲಸಕ್ಕೆ ಹೋಗದೆ ಎರಡು ದಿನ ಮನೆಯಲ್ಲಿಯೇ ಇದ್ದ ಪ್ರತೀಕ್ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.