
ಮುಧೋಳ: ಒಳ ಮೀಸಲಾತಿ ಜಾರಿ ಕೇವಲ ವೋಟ್ ಬ್ಯಾಂಕ್ ರಾಜಕರಣವಷ್ಟೆ. ಅದರಲ್ಲಿ ಹಲವಾರು ನ್ಯೂನ್ಯತೆಗಳಿದ್ದು, ಸಂಪುಟ ಸಭೆಯಲ್ಲಿ ಕೆಲವು ಸಮುದಾಯದ ಶಾಸಕರು ತಕರಾರು ಮಾಡಿದ್ದಾರೆ ಸಂಸದ ಗೋವಿಂದ್ ಕಾರಜೋಳ ಹೇಳಿದರು.
ಮುಧೋಳದಲ್ಲಿ ಮಾಧ್ಯಮಗಳೊಂದಿಗೆ ಒಳ ಮೀಸಲಾತಿ ಜಾರಿ ವಿಚಾರವಾಗಿ ಮಾತನಾಡಿದ ಅವರು, ಇದು ಕೇವಲ ವೋಟ್ ಬ್ಯಾಂಕ್ ರಾಜಕಾರಣಿಕ್ಕಾಗಿ ಒಳ ಮೀಸಲಾತಿ ಜಾರಿ ಮಾಡಿಕೊಟ್ಟಿದ್ದಾರೆ.ವರದಿಯಲ್ಲಿ ನ್ಯೂನ್ಯತೆಗಳಿದ್ದಾವೆ ಅದು ಸರಿಯಿಲ್ಲ.ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಮುದಾಯಗಳು ತಕರಾರು ಮಾಡಿದ್ದಾರೆ.ಒಕ್ಕಲಿಗರ ಸಂಘದವರು, ಮಠಾಧೀಶರು, ವೀರಶೈವ ಲಿಂಗಾಯಿತ ಮಠಾಧೀಶರ ಸಂಘಟನೆ ತೀವ್ರವಾಗಿ ವಿರೋಧಿಸಿದ್ದಾರೆ.ಹೀಗಾಗಿ ಇದು ಅವೈಜ್ಞಾನಿಕ ವರದಿ ಇದ್ದಾಗಿದ್ದು.ಆ ವರದಿಗೆ ಅಧ್ಯಕ್ಷರು ಸದಸ್ಯರು ಕೆಲವರು ಸಹಿ ಮಾಡಿಲ್ಲ. ಸಹಿ ಮಾಡದೆ ಇದ್ರೇ ಅಧಿಕೃತ ವರದಿ ಹೇಗಾಗುತ್ತೆ.
ಅದಕ್ಕೆ ಸಹಿ ಮಾಡದೆ ಇದ್ರೆ ದೋಷಪೂರಿತ ವರದಿಯಾಗತ್ತೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಇವಾಗ್ ಕೇಳಿದರೆ ಆ ಮೂಲ ಪ್ರತಿನೇ ಇಲ್ಲ ಅಂತ.ಕಳೆದು ಹೋದಂತೆ ವರದಿಯನ್ನ ಹೇಗೆ ಒಪ್ಪುತ್ತೀರಿ?. ಅದನ್ನು ಜಯಪ್ರಕಾಶ್ ಹೆಗಡೆ ಅವರ ಕಮಿಟಿಯಲ್ಲಿ ಮನೆಮನೆ ಹೋಗಿ ಸರ್ವೆ ಮಾಡಿಲ್ಲ ಎಂದರು. ಬಿಜೆಪಿ ಸರ್ಕಾರ ಇದ್ದಾಗ ಜೈ ಪ್ರಕಾಶ್ ಅವರನ್ನು ನೇಮಕ ಮಾಡಿದ್ದು.ಅವರ ಕಡೆಯಿಂದ ಸಿಎಂ ಸಿದ್ದರಾಮಯ್ಯನವರು ಗಡಿಬಿಡಿಯಲ್ಲಿ ವರದಿಯನ್ನು ತಗೊಂಡಿದ್ದಾರೆ ಅದು ತಪ್ಪು ಎಂದರು.
ಇನ್ನು ಭಾರತ ಸರ್ಕಾರ ಜನಗಣತಿ ಜಾತಿಗಣತಿಯನ್ನು 2 ಒಂದೇ ಸಾರಿ ಮೋದಿ ಅವರು ಸರಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಸಾಮಾಜಿಕ ನ್ಯಾಯ ಎಂದರೇನು?ರಾಜ್ಯದಲ್ಲಿ ಮೀಸಲಾತಿಗೆ ಒಳ ಮೀಸಲಾತಿ ಕೊಡಬೇಕಾಗುತ್ತೆ. ಎಸ್ ಸಿ, ಎಸ್ ಟಿ ಅವರಿಗೆ ಒಳ ಮೀಸಲಾತಿ ರಿಸರ್ವೇಶನ್ ಕೊಡಬೇಕಾಗುತ್ತೆ.ಸರ್ಕಾರಿ ಸೌಲಭ್ಯಗಳನ್ನು ತಗೊಳೋಕಾಗಿಲ್ಲ ಅಂತವರನ್ನು ಗುರುತಿಸಿ, ಅವರಿಗಾಗಿ ಸರಕಾರಿ ಸವಲತ್ತುಗಳನ್ನ ಕೊಟ್ಟು ವಿಶೇಷವಾಗಿ ಗುರುತಿಸುವ ಸಲುವಾಗಿ ಜಾತಿ ಗಣತಿ ಬೇಕಾಗಿದೆ.ಸಾಮಾಜಿಕ ಕಳಕಳಿ ಕಾಳಜಿಯಿಂದ ಜನಗಣತಿ ಜಾತಿಗಣತಿ ಮಾಡಬೇಕಾಗಿದೆ ಎಂದರು.