ಕರ್ತವ್ಯದ ತುರ್ತುಕರೆ: ಲಚ್ಯಾಣದಲ್ಲಿ ಯೋಧನಿಗೆ ಸಂಭ್ರಮದ ಬಿಳ್ಕೊಡುಗೆ.

ಪೆಹಲ್ಗಾಮ್‌ದಲ್ಲಿ ಅಮಾಯಕರ ಮೇಲೆ ಉಗ್ರರು ನಡೆಸಿದ ದಾಳಿಯ ಹಿನ್ನಲೆ ಪಾಕಿಸ್ಥಾನದಲ್ಲಿನ ಉಗ್ರರ ವಿರುದ್ಧ ಭಾರತವು “ಅಪರೇಷನ್ ಸಿಂಧೂರ” ಹೆಸರಿನಲ್ಲಿ ಯುದ್ದ ಅತ್ತ ಮುಂದುವರೆಸಿದೆ. ಇತ್ತ ಭಾರತೀಯ ಸೇನೆಯು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದ ಸಿಆರ್‌ಪಿಎಫ್ ಯೋಧ ರಮೇಶ ಅಹಿರಸಂಗ ಅವರಿಗೆ ಕರ್ತವ್ಯದ ತುರ್ತು ಕರೆ ಮಾಡಿ ಆಹ್ವಾನಿಸಿದ ಹಿನ್ನೆಲೆ ಅವರು ತಮ್ಮ ರಜೆಯನ್ನು ಮೊಟಕುಗೊಳಿಸಿ ಶನಿವಾರ ಬೆಳಿಗ್ಗೆ ಗ್ರಾಮದ ಆರಾದ್ಯದೇವ ಪವಾಡ ಪುರುಷ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರಿಗೆ ಪೂಜೆ ಸಲ್ಲಿಸಿ ಜಮ್ಮು ಕಾಶ್ಮಿರದತ್ತ ಪ್ರಯಾಣ ಬೆಳೆಸಿದರು.
ಈ ಹಿನ್ನಲೆಯಲ್ಲಿ ಗ್ರಮಸ್ಥರು ವೀರ ಯೋಧ ರಮೇಶ್ ಅಹಿಸರಸಂಗ ಅವರಿಗೆ ಮಠದ ಆವರಣದಲ್ಲಿ ಸಿಂಧೂರ ತಿಲಕವಿಟ್ಟು ಹೂ ಮಾಲೆ ಹಾಕಿ ಸನ್ಮಾನಿಸಿ ಗೌರವಿಸಿ ಯುದ್ಧದಲ್ಲಿ ಗೆದ್ದು ಬಾ ಎಂದು ಸಂಭ್ರಮದಿ0ದ ಬಿಳ್ಕೊಟ್ಟ ನೋಟ ನೆರೆದ ಜನರಲ್ಲಿ ದೇಶಭಕ್ತಿಯನ್ನು ಉಂಟು ಮಾಡಿತು.
ಈ ಸಂದರ್ಭದಲ್ಲಿ ಯೋಧ ರಮೇಶ ಅಹಿರಸಂಗ ಮಾತನಾಡಿ, ದೇಶ ಸೇವೆಯೇ ಈಶ ಸೇವೆ. ಇದೇ ಗ್ರಾಮದಲ್ಲಿ ಹುಟ್ಟಿ, ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಕೃಪೆಯಿಂದ ಇದೇ ಗ್ರಾಮದಲ್ಲಿ ಶಿಕ್ಷಣ ಪಡೆದ ನನಗೆ ಸೈನಿಕನಾಗಿ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಯೋಧನ ತಂದೆ ಈರಣ್ಣ ಅಹಿರಸಂಗ, ಸಹೋದರ ಮಹೇಶ ಅಹಿರಸಂಗ, ಸ್ಥಳಿಯರಾದ ನಿವೃತ್ತ ಶಿಕ್ಷಕ ವ್ಹಿ.ಎಂ. ಕರಾಳೆ, ಧರ್ಮರಾಯ ಮುಜಗೊಂಡ, ಧನರಾಜ್ ಮುಜಗೊಂಡ, ಮಲಕಣ್ಣಾ ಗುಬ್ಯಾಡ, ಯಶವಂತ ಬಿರಾದಾರ, ಮಾಜಿ ಸೈನಿಕರು, ಕ್ರೀಡಾಪಟುಗಳು ಸೇರಿದಂತೆ ಗ್ರಾಮದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.