
ಆಪರೇಷನ್ ಸಿಂಧೂರ ಬಗ್ಗೆ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಸುಳ್ಳು ಸುದ್ದಿ.
ಕರ್ನಾಟಕ ಸೊಸೆ ಸೋಫಿಯಾ ಗಂಡನ ಮನೆ ಮೇಲೆ ಅಟ್ಯಾಕ್ ಅಂತಾ X ಖಾತೆಯಲ್ಲಿ ಸುಳ್ಳು ಪೋಸ್ಟ್.
ಸುಳ್ಳು ಸುದ್ದಿ ನಂಬದಂತೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಮನವಿ.
ಅನಿಸ್ ಉದ್ದೀನ್ ಎಂಬಾತನಿಂದ X ಖಾತೆಯಲ್ಲಿ ಸೋಫಿಯಾ ಖುರೇಷಿ ಗಂಡನ ಮನೆ ಮೇಲೆ ಆರ್‌ಎಸ್ಎಸ್ ಅಟ್ಯಾಕ್ ಮಾಡಿದೆ ಎಂದು ಪೋಸ್ಟ್.
ಕರ್ನಲ್ ಸೋಫಿಯಾ ಫೋಟೋ ಜೊತೆಗೆ ಮನೆಯನ್ನ ಧ್ವಂಸ ಮಾಡಿರೋ ಯಾವುದೋ ಹಳೆ ಫೋಟೋ ಪೋಸ್ಟ್.
X ಖಾತೆಯಲ್ಲಿ ಪೋಸ್ಟ್ ಮಾಡಿದ ವಿಚಾರ ಗೊತ್ತಾಗುತ್ತಿದ್ದಂತೆ ಸೋಫಿಯಾ ಪತಿಯ ಮನೆಗೆ ಪೊಲೀಸರು ಭೇಟಿ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಪೊಲೀಸರು ಭೇಟಿ.
ಸೋಫಿಯಾ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಮನೆ ಮೇಲೆ ಯಾವುದೇ ಅಟ್ಯಾಕ್ ಆಗಿಲ್ಲ.
ಆದ್ರೂ ಸುರಕ್ಷತಾ ಕ್ರಮವಾಗಿ ಸೋಫಿಯಾ ಮನೆಗೆ ಪೊಲೀಸ್ ರಕ್ಷಣೆ ಒದಗಿಸಿದ ಗೋಕಾಕ್ ಪೊಲೀಸರು.
ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸುಳ್ಳು ಸುದ್ದಿ ಪೋಸ್ಟ್ ಡಿಲಿಟ್.