ಭಾರತ- ಪಾಕಿಸ್ತಾನದ ನಡುವೆ ಯುದ್ಧ ಉದ್ವಿಗ್ನತೆ ಹಿನ್ನೆಲೆ…. ರಜೆ ಮೇಲೆ ಬಂದಿದ್ದ ಯೋಧರಿಗೆ ಸೇನೆಯಿಂದ ಬುಲಾವ್

ಬಾಗಲಕೋಟೆ : ಭಾರತ ಪಾಕಿಸ್ತಾನದ ನಡುವೆ ಯುದ್ಧ ಉದ್ವಿಗ್ನತೆ ಹಿನ್ನೆಲೆಯಲ್ಲಿ ರಜೆ ಮೇಲೆ ಬಂದಿದ್ದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಇನಾಂ ಹಂಚಿನಾಳ ಗ್ರಾಮದ ಯೋಧರಿಗೆ ಸೇನೆಯಿಂದ ಕರೆ ಬಂದಿದ್ದು ಮರಳಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ಕಳೆದ ಐದಾರು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮುತ್ತಪ್ಪ ಉಪ್ಪಲದಿನ್ನಿ ವಾರದ ಹಿಂದಷ್ಟೇ ಮಗಳ ಜವಳ ಕಾರ್ಯಕ್ರಮಕ್ಕೆ ಬಂದಿದ್ದ. ಈಗ ರಜೆ ಮೇಲೆ ಬಂದಿದ್ದ ಯೋಧನಿಗೆ ಸೇನೆಯಿಂದ ಬುಲಾವ್ ಬಂದಿದೆರಜೆ ಮೊಟಕುಗೊಳಿಸಿ ಪತ್ನಿ, ಕುಟುಂಬಸ್ಥರನ್ನು ಬಿಟ್ಟು ಪಶ್ಚಿಮ ಬಂಗಾಲಕ್ಕೆ ತೆರಳಲಿರುವ ಮುತ್ತಪ್ಪ ಉಪ್ಪಲ್ದಿನ್ನಿ ಮರಳಿ ಸೇನೆಗೆ ಹೊರಟ ಮುತ್ತಪ್ಪನಿಗೆ ಕುಟುಂಬಸ್ಥರು ಕೇಕ ಕತ್ತರಿಸಿ ಸೆಲೆಬ್ರೇಶನ್ ಮಾಡಿದ್ದಾರೆ.
ಯೋಧನಿಗೆ ಕೇಕ್ ತಿನ್ನಿಸಿ, ಹೂ ಎರಚಿ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿ ಯೋಧನಿಗೆ ತಾಯಿ, ಪತ್ನಿ, ಆರತಿ ಮಾಡಿ ಸಿಂಧೂರ ಇಟ್ಟು ಸೇನೆಗೆ ಕುಟುಂಬಸ್ಥರು ಬೀಳ್ಕೊಟ್ಟಿದ್ದಾರೆ ಭಾರತ ದೇಶಕ್ಕೆ ಸೇವೆ ಮಾಡಲು ಪ್ರಾಣವನ್ನೇ ಕೊಡುತ್ತೇನೆ ಎಂದು ವೀರಯೋಧ ಮುತ್ತಪ್ಪ ಹೇಳಿದರು