ಒಳ ಮೀಸಲಾತಿ ಜಾತಿ ಗಣತಿಯಲ್ಲಿ ಮಹಾ ಎಡವಟ್ಟು.

ಮೊಬೈಲ್ ಆಪ್ ನಲ್ಲಿ ನಾವೊಂದು ಜಾತಿಯ ಹೆಸರು ಬರೆಸಿದರೆ ಅದೊಂದು ಜಾತಿಯ ಹೆಸರು ತೋರಿಸುತ್ತಿದೆಒಂದು ಮನೆಯ ಸದಸ್ಯರ ಜಾತಿಗಣತಿ ಮಾಡೋದಕ್ಕೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಮೊಬೈಲ್ ಆಪ್ ಸರ್ವರ್ ತೊಂದರೆ.ಜಾತಿ ಗಣತಿ ಸಮೀಕ್ಷೆಯಲ್ಲಿ ಲೋಪದೋಷ ಸಮೀಕ್ಷೆ ಅವಧಿ ವಿಸ್ತರಣೆಗೆ ಆಗ್ರಹಿಸಿದ ಕೊರಟಗೆರೆಯ ಚಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಹನುಮ ಮೂರ್ತಿ ತಿಳಿಸಿದರು..
ಚಲವಾದಿ ಮಹಾಸಭಾ ವತಿಯಿಂದ ತುಮಕೂರು ಜಿಲ್ಲೆಯ ಕೊರಟಗೆರೆ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು…ಈಗಾಗಲೇ ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಪೂರ್ವಭಾವಿ ಸಿದ್ಧತೆಗಳಲ್ಲದೆ ಮಾಡಿರುವುದು
ಶಿಕ್ಷಕರಿಗೆ ಕೊಟ್ಟಿರುವ ಮೊಬೈಲ್ ಆಪ್ ಸರಿಯಾಗಿ ಕೆಲಸ ಮಾಡದೆ ಲೋಪದೋಷಗಳು ಕಂಡುಬಂದಿವೆ ಮೊಬೈಲ್ ಆಪ್ ನಲ್ಲಿ ನಾವೊಂದು ಜಾತಿಯ ಹೆಸರನ್ನು ಕೊಟ್ಟರೆ ಅದೊಂದು ಜಾತಿಯ ಹೆಸರನ್ನು ತೆಗೆದುಕೊಳ್ಳುತ್ತದೆ ಎಂದು ಆರೋಪಿಸಿದ ಚಲವಾದಿ ಸಮುದಾಯದ ಸದಸ್ಯರು..
ಅದಕ್ಕಾಗಿ ಸರ್ಕಾರ ಎಲ್ಲವನ್ನು ಸರಿಪಡಿಸಿ ಜಾತಿ ಗಣತಿ ಸಮೀಕ್ಷೆಗೆ ಅವಧಿ ವಿಸ್ತರಿಸಿ ಅವಕಾಶವನ್ನು ಕಲ್ಪಿಸಿ ಕೊಡುವಂತೆ..ನಾವು ಉಪಜಾತಿ ಹೆಸರು ಬರೆಸಿ ಚಲವಾದಿ ಜಾತಿ ಎಂದು ಬರೆಸಿದರೆ ಅದು ಪರಿಶಿಷ್ಟ ಜಾತಿ ಬದಲಿಗೆ ಪರಿಶಿಷ್ಟ ಪಂಗಡ ಎಂದು ತೊರಿಸುತಿದೆ.
ಇದು ಕೇವಲ ಕೊರಟಗೆರೆ ಜಾತಿ ಗಣತಿ ಸಮಸ್ಯೆ ಅಲ್ಲ ಇಡಿ ರಾಜ್ಯದಲ್ಲಿ ಇದೆ ತೋರಿಸಲಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಸಮಸ್ಯೆ ಬಗೆಹರಿಸುವ ಮೂಲಕ ವೈಜ್ಞಾನಿಕವಾಗಿ ಮತ್ತೆ ಜಾತಿ ಗಣತಿ ದಿನಾಂಕವನ್ನು ವಿಸ್ತರಣೆ ಮಾಡಬೇಕು.
ಗ್ರಾಮಿಣ ಬಾಗದ ಜನರು ಸೇರಿದಂತೆ ಪಟ್ಟಣದಲ್ಲೂ ಸಹ ಕೂಲಿ ನಾಲಿ ಮಾಡಲು ಹೋಗುತ್ತಾರೆ ಹಾಗಾಗಿ ಒಂದು ಸಾರಿ ಹೋಗಿ ಜಾತಿ ಗಣತಿ ಕಾರ್ಯವನ್ನು ಮಾಡಿದರೆ ಆಗುವುದಿಲ್ಲ ಒಂದು ಗ್ರಾಮಕ್ಕೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಜಾತಿ ಗಣತಿ ಮಾಡಲು ಆಗ್ರಹಿಸಿದರು
ಕೊರಟಗೆರೆಯ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಚಲವಾದಿ ಮಹಾಸಭಾ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು..