Uncategorized
ರಸ್ತೆ ಬದಿ ಒಂದು ಟೀ ಸವಿದು ₹2,000 ನೀಡಿದ ಉಪಮುಖ್ಯಮಂತ್ರಿ ಪರಮೇಶ್ವರ್

ರಸ್ತೆ ಬದಿ ಒಂದು ಟೀ ಸವಿದು ₹2,000 ನೀಡಿದ ಉಪಮುಖ್ಯಮಂತ್ರಿ ಪರಮೇಶ್ವರ್
ತುಮಕೂರಿನ ಕೊರಟಗೆರೆಯಲ್ಲಿ ಉಪಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಆಗಮಿಸಿದ ಡಾ. ಜಿ. ಪರಮೇಶ್ವರ್ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ.
ಈ ಸಂದರ್ಭದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗಿನ ತಮ್ಮ ಸಂಬಂಧವನ್ನು ಜೋಡೆತ್ತುಗಳು ಎಂದು ಬಣ್ಣಿಸಿ ತಾವು ಒರಿಜಿನಲ್ ಕಾಂಗ್ರೆಸ್ಸಿಗರು ಎಂದು ಹೇಳಿಕೊಂಡರು.
ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ನಾಗೇನಹಳ್ಳಿ ಬಳಿ ರಸ್ತೆಬದಿ ಅಂಗಡಿಯಲ್ಲಿ ಟೀ ಸೇವಿಸಿದ ಅವರು, ಆ ಟೀಗೆ ಬರೋಬ್ಬರಿ 2000 ರೂಪಾಯಿ ನೀಡಿದ್ದಾರೆ.



