ಬಿಜಾಪುರ
ಪ್ರಧಾನಿ ಮೋದಿ ಬಗ್ಗೆ ರಾಜ್ಯ ಕಾಂಗ್ರೆಸ್ ಸಚಿವರಿಗೆ ಹೆದರಿಕೆ ಇದೆ: ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಪ್ರಧಾನಿ ಮೋದಿ ಬಗ್ಗೆ ರಾಜ್ಯ ಕಾಂಗ್ರೆಸ್ ಸಚಿವರಿಗೆ ಹೆದರಿಕೆ ಇದೆ ಎಂದು ವಿಜಯಪುರ ಸಂಸದ ರಮೇಶ ಜಗಜಿಣಗಿ ತಿಳಿಸಿದರು. ಅವರಿಂದು ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿ ಪಾಕಿಸ್ತಾನ ಭಾರತ ಕದನದಲ್ಲಿ ರಾಜಕೀಯ ಸಲ್ಲದು, ಕದನ ವಿರಾಮದಲ್ಲಿ ಕಾಂಗ್ರೆಸ್ ಸಚಿವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಚಿವರ ವಿರುದ್ಧ ಜಿಗಜಿಣಗಿ ಕಿಡಿಕಾರಿದರು. ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.
ಮೋದಿಗೆ ಅವಮಾನ ಮಾಡುವ ಉದ್ದೇಶ ಕಾಂಗ್ರೆಸ್ ಸಚಿವರು ಕೆಟ್ಟ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು.
ಇನ್ನು ಕೆಂದ್ರ ಸರ್ಕಾರದಿಂದ ಅನುದಾನ ಎಲ್ಲ ಇಲಾಖೆಗೆ ಬಂದಿದೆ. ಅದಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ವಾಗ್ದಾಳಿ ನಡೆಸಿ ಮೋದಿ ವಿರುದ್ಧ ಮಾತನಾಡುವುದು ಖಂಡನೀಯ ಎಂದರು.