ಗದಗ- ವಾಡಿ ರೈಲು ಯೋಜನೆಗೆ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ಕೊಪ್ಪಳ: ಗದಗ- ವಾಡಿ ರೈಲು ಯೋಜನೆಗೆ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಕುಷ್ಟಗಿ ರೈಲು ನಿಲ್ದಾಣದಲ್ಲಿ ಕುಷ್ಟಗಿ- ಹುಬ್ಬಳ್ಳಿ ರೈಲ್ವೇಗೆ ಗುರುವಾರ (ಮೇ 15) ಚಾಲನೆ ನೀಡಲಾಯಿತು.
ಗದಗ-ವಾಡಿ ರೈಲ್ವೇ ಯೋಜನೆ ಈ ಭಾಗದ ಬಹು ನಿರೀಕ್ಷಿತ ಯೋಜನೆಯಾಗಿತ್ತು.
ಕಳೆದ 10 ವರ್ಷದಲ್ಲಿ ರೈಲ್ವೇ ಕಾಮಗಾರಿ ತ್ವರಿತವಾಗಿ ನಡೆದು, ತಳಕಲ್-ಕುಷ್ಟಗಿಯವರೆಗೂ 56 ಕಿಮೀ ರೈಲ್ವೇ ಹಳಿ ಕಾಮಗಾರಿ ಪೂರ್ಣಗೊಂಡಿದೆ.
ಹಿಂದೆ ಇದ್ದ ಕೇಂದ್ರ ರೈಲ್ವೆ ಖಾತೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆಜಿ ಯೋಜನೆ ಜಾರಿಗೆ ತಂದಿದ್ದರು ಮತ್ತು ಯಲಬುರ್ಗಾ ಕ್ಷೇತ್ರ ಶಾಸಕರಾದ ಶ್ರೀಯುತ ಬಸವರಾಜ್ ರಾಯರೆಡ್ಡಿ ಸಾಹೇಬರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಇವರ ಶ್ರಮದಿಂದ ಈ ನೂತನ ರೈಲ್ವೆ ಮಾರ್ಗ ಈ ಸಂಭ್ರಮಚರಣೆಗೆ ಕಾರಣೀಭೂತರು.
ಸ್ವಾತಂತ್ರ್ಯ ನಂತರ ಇಂದು ಮೊದಲ ಬಾರಿಗೆ ಕುಷ್ಟಗಿಯಿಂದ ತಳಕಲ್ ಗೆ ರೈಲು ಓಡಿದೆ.
ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ, ಶಾಸಕ ದೊಡ್ಡನಗೌಡ ಪಾಟೀಲ್ ಸೇರಿ ಹಲವರು ಭಾಗಿಯಾಗಿದ್ದರು..