
ಬೆಳಗಾವಿ: ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿನ ಮಸೀದಿಯಲ್ಲಿನ ಕುರಾನ್ ಪುಸ್ತಕ ಕದ್ದು ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮ್ ಸಮಾಜದ ಮುಖಂಡರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತೇರಾ ಮೇರಾ ರಿಸ್ತಾ ಕ್ಯಾ ಹೈ ಲಾಹೀಲಾಲ್ ಇಲ್ಲಲ್ಲಾ, ಅಲ್ಲಾಹು ಅಕ್ಬರ್ ಹಾಗೂ ಭಾರತ ದೇಶದ ಪರ ಘೋಷಣೆ ಕೂಗಿ ಕಿಡಿಗೇಡಗಳ ಬಂಧಿಸುವಂತೆ ಆಗ್ರಹಿಸಿದರು.
ಸಂತಿ ಬಸ್ತವಾಡ ಕೆಳಮಹಡಿಯಲ್ಲಿದ್ದ ಧರ್ಮ ಗ್ರಂಥವನ್ನು ಭಾನುವಾರ ರಾತ್ರಿ ಕಳ್ಳತನ ಪಕ್ಕದ ಜಮೀನಿನಲ್ಲಿ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಬೆಳಗ್ಗೆ ಪ್ರಾರ್ಥನೆ ಮಾಡಲು ಆಗಮಿಸಿದಾಗ ಧರ್ಮಗ್ರಂಥ ಇಲ್ಲದಿರುವುದು ಗೊತ್ತಾಗಿದೆ. ಸುತ್ತಲಿನ ಪ್ರದೇಶದಲ್ಲಿ ಹುಡುಕಾಡಿದಾಗ ಖಾಲಿ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಧರ್ಮಗ್ರಂಥ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿ ಕಾರಿಗಳು ಸಂತಿಬಸ್ತವಾಡ ಗ್ರಾಮದಲ್ಲಿ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರ ಬಂಧಿಸಲು ಕ್ರಮ ವಹಿಸಲಾಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗದಂತೆ ಶಾಂತಿ ಕಾಪಾಡಬೇಕು,” ಎಂದು ಮನವಿ ಮಾಡಿದರು. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಿಬಸ್ತವಾಡದಿಂದ ಚನ್ನಮ್ಮ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿರುವ ಮುಸ್ಲಿಮ್ ಸಮಾಜದ ನೂರಾರು ಜನರು ಸೋಮವಾರ ಚನ್ನಮ್ಮ ವೃತ್ತದಲ್ಲಿ ತೇರಾ ಮೇರಾ ರಿಷ್ತಾ ಕ್ಯಾ ಹೈ ಲಾ ಇಲಾಹಾ ಇಲ್ಲಲ್ಲಾ
ಅಲ್ಲಾ ಹು ಅಕ್ಬರ್ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಕುರಾನ್ ಪುಸ್ತಕ ಸುಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.