ಧಾರವಾಡ
ಧಾರವಾಡ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಮಹಾನಗರ ಪಾಲಿಕೆ,ಹೃತ್ಪೂರ್ವಕ ಧನ್ಯವಾದ ತಿಳಿಸಿದ ಧಾರವಾಡದ ಜನತೆ

ಧಾರವಾಡ : ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಮಹಾನಗರ ಪಾಲಿಕೆಗೆ ಅನುಮತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಧಾರವಾಡದ ಜನತೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದು ಧಾರವಾಡದ ಸಮಗ್ರ ಅಭಿವೃದ್ಧಿಗೆ ನಾಂದಿ ಆಗಲಿದೆ.
ಪ್ರತ್ಯೇಕ ಮಹಾನಗರ ಪಾಲಿಕೆಯ ಸ್ಥಾಪನೆಯಿಂದ ಧಾರವಾಡದ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಸಾಧ್ಯವಾಗುತ್ತದೆ. ಸ್ಥಳೀಯ ಸೌಕರ್ಯಗಳು, ಮೂಲಸೌಕರ್ಯ ಯೋಜನೆಗಳು, ಮತ್ತು ನಾಗರಿಕರಿಗೆ ಅಗತ್ಯವಾದ ಸೇವೆಗಳನ್ನು ಸಮರ್ಪಕವಾಗಿ ಪ್ರತ್ಯಕ್ಷಗೊಳಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸಲಿದೆ.
ಈ ಮಹತ್ವದ ನಿರ್ಣಯದ ಮೂಲಕ, ಧಾರವಾಡವು ತನ್ನ ಸ್ವತಂತ್ರ ಪಥವನ್ನು ಹೊಂದಿ, ಸಮಗ್ರ ಬೆಳವಣಿಗೆಯ ಗುರಿಯನ್ನು ಸಾಧಿಸಲು ಹೊಸ ಹಾದಿಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ.