ಬೆಳಗಾವಿ

ಸಮ ಸಮಾಜ ನಿರ್ಮಾಣಕ್ಕೆ ಸಂಘಟನೆ ಅನಿವಾರ್ಯ: ನಟ ಚೇತನ

ಚ.ಕಿತ್ತೂರು: ಬುದ್ದ ಬಸವಣ್ಣ ಅಂಬೇಡ್ಕರ್ ಹಾಗೂ ಪೆರಿಯಾರ ಕಂಡ ಸಮ ಸಮಾಜದ ನಿರ್ಮಾಣಕ್ಕೆ ಅಸಂಘಟಿತ ವಲಯಗಳು ಶೋಷಿತರ ಸಮುದಾಯಗಳು ಒಗ್ಗೂಡಿ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಅನಿವಾರ್ಯತೆ ಇದೆ ಎಂದು ನಟ ಚೇತನ ಕರೆ ನೀಡಿದರು.
ಕಿತ್ತೂರಿಗೆ ಆಗಮಿಸಿದ ಅವರು ರಾಣಿ ಚನ್ನಮ್ಮಾಜಿ ಅಮಟೂರು ಬಾಳಪ್ಪ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಕಿತ್ತೂರು ನೆಲಕ್ಕೆ ವಿಶೇಷವಾದ ಇತಿಹಾಸ ಇದೆ ಸ್ವಾತಂತ್ರ್ಯ ಇತಿಹಾಸದಲ್ಲಿ ಮಹತ್ತ್ವದ ಇತಿಹಾಸ ಸೃಷ್ಟಿಸಿದ ರಾಣಿ ಚನ್ನಮ್ಮಾಜಿಯವರ ಸ್ಥಳಕ್ಕೆ ಆಗಮಿಸಿದ್ದು ಖುಷಿ ತಂದಿದೆ ಎಂದರು.
‘ಸಮಾನತೆ’ ಹೆಸರಿನಲ್ಲಿ ಸಮ ಸಮಾಜದ ಕನಸು ಕಂಡಿರುವ ಬುದ್ದ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತಿ ಭವಿಷ್ಯದ ಸಮ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ ಎಂದರು. ಇದು ರಾಜಕೀಯ ಅಧಿಕಾರದಿಂದ ಸಾಧ್ಯ ಹೀಗಾಗಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ನ್ಯಾಯ ಕಾನೂನು ಹಾಗೂ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಕುವೆಂಪು ಆಶಯದ ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಅನುಷ್ಠಾನಕ್ಕೆ ಮುಂದಾಗುವಂತೆ ಕರೆ ನೀಡಿದರು.
ಹೊಸ ಪಕ್ಷ ಕಟ್ತಾರಾ ಚೇತನ್
ವೈಚಾರಿಕ ಚಿಂತನೆಗಳ ಮೂಲಕ ಈಗಾಗಲೇ ಬೆಳಗಾವಿ ಜಿಲ್ಲೆಯ 15 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿದ ನಟ ಚೇತನ ಸಮ ಸಮಾಜ ನಿರ್ಮಾಣ ಆಶಯದ ಸಮಾನ ಮನಸ್ಕರ ತಂಡ ಕಟ್ಟುತ್ತಿದ್ದು ಈ ನಿಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮಹತ್ವದ ವಿಚಾರವನ್ನು ಮಂಡಿಸಿದರು. ಸೇವಾ ಮನೋಭಾವನೆ ಹೊಂದಿರುವ ಆಸಕ್ತ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿದಲ್ಲಿ 2028 ರ‌ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ರಾಜ್ಯದ 135 ವಿಧಾನಸಭಾ ಕ್ಷೇತ್ರಗಳನ್ನೂ ಸಂಚರಿಸಿದ್ದು ಒಂದು ಹಂತದ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ ಎಂದರು.
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಉಪಜಾತಿ ಕಾಲಂನಲ್ಲಿ ಬೇಡ ಜಂಗಮ ಎಂದು ದಾಖಲಿಸುತ್ತಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡರು ದಲಿತರ ಮೀಸಲಾತಿ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ ಹೀಗಾಗಿ ಸಮೀಕ್ಷೆ ಸಂದರ್ಭದಲ್ಲಿ ಬೇಡ ಜಂಗಮ ಉಪಜಾತಿ ದಾಖಲಿಸಲು ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲು ಚೇತನ ಅವರನ್ನು ಒತ್ತಾಯಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button