
ಹುಕ್ಕೇರಿ: ನಗರದಲ್ಲಿ ವಿವಿಧ ಮುಸಲ್ಮಾನ ಸಂಘಟನೆ ಮತ್ತು ಹನ್ನೊಂದು ಜಮಾತ ಸದಸ್ಯರಿಂದ ಧರ್ಮ ಗ್ರಂಥಕ್ಕೆ ಆದ ಅವಮಾನ ಖಂಡಿಸಿ ಬೃಹತ್ ಪ್ರತಿಭಟನೆ ಜರುಗಿತು.
ಇತ್ತಿಚಿಗೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿ ಯಲ್ಲಿ ಮುಸ್ಲಿಂ ಧರ್ಮದ ಪವಿತ್ರ ಗ್ರಂಥ ಕುರಾನ್ ಸುಟ್ಟು ಹಾಕಿದ ಕಿಡಿಗೆಡಿಗಳಿಗೆ ಉಗ್ರ ಕ್ರಮ ಜರಗಿಸುವಂತೆ ಆಗ್ರಹಿಸಿ ಹುಕ್ಕೇರಿ ತಾಲೂಕಿನ ವಿವಿಧ ಮುಸಲ್ಮಾನ ಸಂಘಟನೆಗಳ ಸದಸ್ಯರು ,ಯುವಕರು ಬೃಹತ್ ಪ್ರತಿಭಟನಾ ರ್ಯಾಲಿ ಜರುಗಿಸಿ ಕೋರ್ಟ ಸರ್ಕಲ್ ಬಳಿ ಜಮಾವಣೆಗೊಂಡು ಘೋಷನೆ ಕೂಗಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಮೌಲಾನಗಳು ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ಮಸೀದಿ ಯಲ್ಲಿ ಕುರಾನ್ ಸುಟ್ಟು ಹಾಕಿದ್ದಾರೆ ಆದರೆ ಇಲ್ಲಿಯವರಗೆ ಪೋಲಿಸರು ಯಾರನ್ನು ಬಂಧಿಸಿಲ್ಲಾ ಕೂಡಲೇ ಕಿಡಗೇಡಿಗಳನ್ನು ಬಂಧಿಸಬೇಕು , ಮೆಲಿಂದ ಮೇಲೆ ಅನ್ಯ ಧರ್ಮದವರು ಮುಸ್ಲಿಂ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಇದನ್ನು ನಾವು ತಿವ್ರವಾಗಿ ಖಂಡಿಸುತ್ತೆವೆ, ಸರ್ಕಾರ ಕೂಡಲೇ ಮುಸಲ್ಮಾನರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ನಂತರ ಹನ್ನೊಂದು ಜಮಾತ ಅದ್ಯಕ್ಷ ಸಲಿಂ ನದಾಫ್ ಗ್ರೇಡ ೨ ತಹಸಿಲ್ದಾರ ಪ್ರಕಾಶ ಕಲ್ಲೋಳ್ಳಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಮೊಮಿನದಾದಾ, ಕೇಸರ ಮೋಕಾಶಿ ಸೇರಿದಂತೆ ನೂರಾರು ಮುಸಲ್ಮಾನ ಯುವಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆ ಸಮಯದಲ್ಲಿ ಯಾವದೇ ಅಹಿತಕರ ಘಟನೆ ಜರುಗದಂತೆ ಪೋಲಿಸ್ ಇನ್ಸಪೇಕ್ಟರ ಗಳಾದ ಮಹಾಂತೇಶ ಬಸ್ಸಾಪೂರೆ, ಎಚ್ ಡಿ ಮುಲ್ಲಾ ಮತ್ತು ಶಿವಶಂಕರ ಅವುಜಿ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೊಬಸ್ತ ನಿಯೋಜಿಸಲಾಗಿತ್ತು.