ಬಾಗಲಕೋಟೆ

ಚಿಂದಿ ಆಯುವ ನೆಪದಲ್ಲಿ ದೇವರ ವಿಗ್ರಹ ಕಳುವು… ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳಿಯರ ಕೈಚಳಕ

ಬಾಗಲಕೋಟೆ : ಬಾಗಲಕೋಟೆಯ ನವನಗರ ವಿದ್ಯಾ ಗಿರಿಯಲ್ಲಿ ಮನೆ ಹಾಗೂ ಅಂಗಡಿಗಳ ಬೀಗ ಮುರಿದು ವಸ್ತುಗಳನ್ನು ದೋಚುವ ಚಿಂದಿ ಆಯುವ ಕಳ್ಳಿಯರ ಹಾವಳಿ ಹೆಚ್ಚಾಗಿದೆ.

ಬಾಗಲಕೋಟೆಯ ನವನಗರ ಮತ್ತು ವಿದ್ಯಾಗಿರಿಯಲ್ಲಿ ಬೆಳ್ಳಂ ಬೆಳಗ್ಗೆ ಚಿಂದಿ ಆಯುವ ಸೋಗಿನಲ್ಲಿ ಬರುವ ಮಹಿಳೆಯರು. ಯಾರೂ ಇಲ್ಲದ್ದನ್ನು ಗಮನಿಸಿ ಯಾವುದೇ ಅಂಜಿಕೆ, ಅಳಕು ಇಲ್ಲದೇ ಮನೆ ಅಂಗಡಿಗಳ ಬೀಗ ಮುರಿದು ಒಳ ನುಗ್ಗಿ ಬಿಂದಾಸ್ ಆಗಿ ವಸ್ತುಗಳನ್ನು ಎಗರಿಸಿ ಪರಾರಿ ಆಗುತ್ತಿದ್ದಾರೆ. ಚಾಲಾಕಿ ಮಹಿಳೆಯರ ತಂಡದ ಜಾಲವೇ ಇದ್ದಂತಿದೆ. ಇತ್ತೀಚೆಗೆ ಬಾಗಲಕೋಟೆಯ ವಿದ್ಯಾಗಿರಿಯ ಕಾಂಪ್ಲೆಕ್ಸ್ ಒಂದಕ್ಕೆ ನುಗ್ಗಿದ ಕಳ್ಳಿಯರು ಕಾಂಪ್ಲೆಕ್ಸ್ ನ ವ್ಯಾಪಾರಸ್ಥರು ಪೂಜೆ ಮಾಡಲು ಪ್ರತಿಷ್ಠಾಪಿಸಿದ್ದ 15 ಕೆ.ಜಿ ತೂಕದ ಕಂಚಿನ ಗಣೇಶ ವಿಗ್ರಹವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಮತ್ತೊಂದು ಕಡೆ ಸ್ಟೋರ್ ರೂಂ ಬೀಗ ಮುರಿದು ಅಲ್ಲಿದ್ದ ವೈಯರ್ ಬಂಡಲ್ ಕಳುವು ಮಾಡಿದ್ದಾರೆ. ಈ ಎರಡೂ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸಿಸಿ ಕ್ಯಾಮರಾ ಪುಟೇಜ್ ಸಹಿತ ಕಳ್ಳತನದ ಬಗ್ಗೆ ಮಾಹಿತಿ ಪೊಲೀಸರಿಗೆ ಮಾಹಿತಿ ನೀಡಿದರೂ ಅವರ ನಿರ್ಲಕ್ಷಿತನದಿಂದ ಪ್ರಯೋಜನವಿಲ್ಲದಂತಾಗಿದೆ. ಇನ್ನೂ ಕೂಡ ಮಹಿಳೆಯರನ್ನು ಪೊಲೀಸರು ಬಂಧಿಸಿಲ್ಲ.

Related Articles

Leave a Reply

Your email address will not be published. Required fields are marked *

Back to top button