ಮುಸ್ಲಿಂ 11 ಜಮಾತ್ ತಂಜಿಮ್ ಕಮಿಟಿ ವತಿಯಿಂದ ಹುಕ್ಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು

ಬೆಳಗಾವಿ: ಜಿಲ್ಲೆಯ ಸಂತಿ ಬಸ್ತವಾಡ ಗ್ರಾಮದಲ್ಲಿ ಪವಿತ್ರವಾದ ಇಸ್ಲಾಂ ಧರ್ಮಕ ಧರ್ಮದ ಕುರಾನ್ ಗ್ರಂಥವನ್ನು ಬೆಂಕಿ ಹಚ್ಚಿ ರುವ ದುಷ್ಕರ್ಮಿಗಳ ವಿರುದ್ಧ ಪ್ರತಿಭಟನೆ
ತೀರಿ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಹಾಗೂ ಮುಖಂಡರು ಗುರುಹಿರಿಯರು ಯುವಕರು ಸೇರಿ ಪೈಗಂಬರ್ ದರ್ಗಾದಿಂದ ಕೋರ್ಟ್ ಸರ್ಕಲ್ ವರೆಗೆ ಬೃಹತ್ ರ್‍ಯಾಲಿ ದೊಂದಿಗೆ ತಲುಪಿದರು
ಕೋರ್ಟ್ ಸರ್ಕಾರದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಗಂಟೆ ರಸ್ತೆ ಬಂದ್ ಮಾಡಿದರು ಸ್ಥಳಕ್ಕೆ ಆಗಮಿಸಿದ ಉಪ ತಹಸಿಲ್ದಾರ್ರಾದ ಶ್ರೀ ಪ್ರಕಾಶ್ ಕಲ್ಲೋಳಿ ಇವರಿಗೆ ಬೆಳಗಾವಿ ಜಿಲ್ಲೆಯ ಸಂಧಿ ಬಸ್ತವಾಡ ಗ್ರಾಮದಲ್ಲಿ ಪವಿತ್ರವಾದ ಕುರಾನ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶೀಘ್ರವಾಗಿ ಬಂಧಿಸಿ ಶಿಕ್ಷೆ ಆಗಬೇಕೆಂದು ಮನವಿ ಮಾಡಿದರು ಮನವಿ ಸ್ವೀಕರಿಸಿದ ಉಪ ತಹಶೀಲ್ದಾರರ ಪ್ರಕಾಶ್ ಕಲ್ಲೋಳಿ ನಿಮ್ಮ ಈ ಮನವಿ ಪತ್ರವನ್ನು ಹುಕ್ಕೇರಿ ಮಾನ್ಯ ತಹಶೀಲ್ದಾರ್ ಸಾಹೇಬರಿಂದ ರಾಜ್ಯಪಾಲರು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಕಳುಹಿಸಲಾಗುವದು ಎಂದು ಹೇಳಿದರು
ಮುಸ್ಲಿಂ ಜಮಾತದ ಮುಖಂಡರು ಮಾತನಾಡಿ ಜಿಲ್ಲೆಯಲ್ಲಿ ಧಾರ್ಮಿಕ ವಿಚಾರಗಳಲ್ಲಿ ಪದೇ ಪದೇ ಕಾನೂನು ಉಲ್ಲಂಘನೆಗಳು ಆಗುತ್ತಿವೆ.
ಆದ್ದರಿಂದ ಈ ಘಟನೆಯ ಹಿಂದೆ ಯಾರು ಯಾರು ಇದ್ದಾರೆ ಎಂಬುವುದು ವಿಚಾರಿಸಿ ಅವರ ಮೇಲೆ ಶೀಘ್ರ ಕ್ರಮ ಕೈಗೊಳ್ಳಬೇಕು ಹಾಗೂ ಪವಿತ್ರವಾದ ಇಸ್ಲಾಂ ಧಾರ್ಮಿಕ ಧರ್ಮದ ಕುರಾನ್ ಗ್ರಂಥವನ್ನು ಎಲ್ಲ ಇಸ್ಲಾಂ ಧರ್ಮದ ಅನುಯಾಯಿಗಳ ಹೃದಯ ನೋವಿಸಲು ಉದ್ದೇಶದಿಂದ ಮಾಡಿರುವ ಈ ಘಟನೆ ಕಠಿಣವಾದ ಕಾನೂನು ಪ್ರಕಾರ ಪ್ರಕರಣ ದಾಖಲೆ ಮಾಡಬೇಕೆಂದು ಕೇಳಿಕೊಂಡರು
ಈ ಸಂದರ್ಭದಲ್ಲಿ ಮುಸ್ಲಿಂ 11 ಜಮಾದ ತಂಜಿಮ್ ಕಮಿಟಿ ಹುಕ್ಕೇರಿ ಹಾಗೂ ವಿವಿಧ ಗ್ರಾಮದ ಮುಸ್ಲಿಂ ಮುಖಂಡರು ಯುವಕರು ಸೇರಿ ಪ್ರತಿಭಟನೆ ಯಶಸ್ವಿಗೊಳಿಸಿದರು