ಬೆಳಗಾವಿರಾಜ್ಯ

ಬೆಳಗಾವಿಯಲ್ಲಿ ಆವರಿಸಿದ ಕಗ್ಗತ್ತಲು; ಬ್ಲ್ಯಾಕ್​ಔಟ್ ಅಣಕು ಪ್ರದರ್ಶನ

ಬೆಳಗಾವಿ: ದೇಶದ ವಿವಿಧೆಡೆ ಯುದ್ಧ ಮತ್ತು ತುರ್ತು ಪರಿಸ್ಥಿತಿ ಎದುರಿಸಲು ಬ್ಲ್ಯಾಕ್​ಔಟ್​ ಅಣಕು ಪ್ರದರ್ಶನ ನಡೆಸಲಾಗುತ್ತಿದ್ದು, ಬೆಳಗಾವಿ ನಗರದಲ್ಲೂ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು. ನಗರದ ಎರಡು ಪ್ರದೇಶಗಳಲ್ಲಿ 15 ನಿಮಿಷಗಳ ಸಂಪೂರ್ಣ ಕಗ್ಗತ್ತಲು ಆವರಿಸಿತ್ತು.

ಕೇಂದ್ರ ಸರ್ಕಾರದ ಸೂಚನೆಯಂತೆ ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಪಾಲಿಕೆ ಆಯುಕ್ತೆ ಶುಭಾ ಬಿ. ನೇತೃತ್ವದಲ್ಲಿ ಹನುಮಾನ ನಗರ, ಕುವೆಂಪು ನಗರದಲ್ಲಿ ಬ್ಲ್ಯಾಕ್​ಔಟ್ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.

ಐದು ಸೈರನ್ ಮೊಳಗುತ್ತಿದ್ದಂತೆ ಈ ಎರಡೂ ಪ್ರದೇಶಗಳಲ್ಲಿ ವಿದ್ಯುತ್ ದೀಪಗಳು ಬಂದ್ ಆದವು. ಮನೆ, ಬೀದಿ ದೀಪಗಳು, ವ್ಯಾಪಾರಿ ಮಳಿಗೆಗಳು, ಅಪಾರ್ಟ್​​ಮೆಂಟ್​ಗಳಲ್ಲಿ ಸಂಪೂರ್ಣವಾಗಿ ವಿದ್ಯುತ್ ಸ್ಥಗಿತಗೊಂಡಿತು. 15 ನಿಮಷಗಳ ಕಾಲ ನಡೆದ ಮಾಕ್​ ಡ್ರಿಲ್​ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಾಲಿಕೆ ಆಯುಕ್ತೆ ಶುಭಾ ಬಿ. ಮಾಧ್ಯಮದವರ ಜೊತೆಗೆ ಮಾತನಾಡಿ, “ಕಳೆದ ಮೂರು ದಿನಗಳಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದೆವು. ಯುದ್ಧದ ಭೀತಿ ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಕುರಿತು ಇಂದು ಅಣಕು ಪ್ರದರ್ಶನ ಮಾಡಲಾಯಿತು. ನಾವು ಐದು ಸೈರನ್ ಕೂಗಿಸುತ್ತಿದ್ದಂತೆ ಜನರು ಸ್ವಯಂಪ್ರೇರಿತವಾಗಿ ತಮ್ಮ ಮನೆಯ ವಿದ್ಯುತ್ ದೀಪ ಬಂದ್ ಮಾಡಿ ಸಹಕರಿಸಿದ್ದು, ಬ್ಲ್ಯಾಕ್​ಔಟ್ ಅಣಕು ಪ್ರದರ್ಶನ ಯಶಸ್ವಿಯಾಗಿದೆ. ಹಾಗಾಗಿ, ಇಲ್ಲಿನ‌ ಸ್ಥಳೀಯರಿಗೆ ನಾನು ಜಿಲ್ಲಾಡಳಿತ ವತಿಯಿಂದ ಧನ್ಯವಾದ ಸಲ್ಲಿಸುತ್ತೇನೆ” ಎಂದರು.ಈ ವೇಳೆ ನಗರಸೇವಕರು, ಪೊಲೀಸ್, ಪಾಲಿಕೆ, ಹೆಸ್ಕಾಂ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಸ್ಥಳೀಯರು ಹಾಜರಿದ್ದು ಅಣಕು ಪ್ರದರ್ಶನ ಯಶಸ್ವಿಗೊಳಿಸಿದರು.

Related Articles

Leave a Reply

Your email address will not be published. Required fields are marked *

Back to top button