ಯಾದಗಿರಿ

ಯಾದಗಿರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಣಕು ಪ್ರದರ್ಶನ ಯಶಸ್ವಿ; ಶಾಸಕ ಚನ್ನಾರೆಡ್ಡಿ ಪಾಟೀಲ್

ಯಾದಗಿರಿ ಮೇ.18:- ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾದ ಆಪರೇಷನ್ ಅಭ್ಯಾಸ ಹೆಸರಿನ ಅಣಕು ಪ್ರದರ್ಶನವನ್ನು ನಗರದಲ್ಲಿಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ನಗರ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಹೇಳಿದರು.

ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಕಲ್ಬುರ್ಗಿ ಎಸ್ ಡಿ ಆರ್ ಎಫ್ ತಂಡ, ಜೆಸ್ಕಾಂ,ಲೋಕೋಪಯೋಗಿ, ಕ್ರೀಡಾ ಇಲಾಖೆ,ಎನ್.ಎಸ್.ಎಸ್ ಹಾಗೂ ,ಎನ್ ಸಿ ಸಿ ಮತ್ತು ಆಶಾ ಕಾರ್ಯಕರ್ತೆಯರ ತಂಡಗಳ ಅಣಕು ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಪಹಲ್ಗಾಮ್ದಲ್ಲಿ ಅಮಾಯಕರ ಮೇಲಾದ ದಾಳಿ ಹ್ಯೇಯ ಕೃತ್ಯವಾಗಿದೆ. ಇಂತಹ ದಾಳಿಗಳು ಹಾಗೂ ಯುದ್ಧದಂತಹ ಸಂದರ್ಭದಲ್ಲಿ ನಡೆಯುವ ದಾಳಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಮಾಕ್ ಡ್ರಿಲ್ ಹಮ್ಮಿಕೊಳ್ಳಲಾಗಿದ್ದು,ಸಾರ್ವಜನಿಕರು ಸದಾ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.

ಯುದ್ದ ಹಾಗೂ ಭಯೋತ್ಪಾದನೆ ದಾಳಿಗಳ ನಿಯಂತ್ರಣಕ್ಕೆ ನಮ್ಮ ರಕ್ಷಣಾ ಪಡೆಗಳು ಸಶಕ್ತವಾಗಿವೆ. ಭಾರತೀಯರು ಒಳ್ಳೆಯವರು. ಹೀಗಾಗಿ ದೇವರ ಕೃಪೆಯಿಂದ ಎಲ್ಲರ ರಕ್ಷಣೆಯಾಗಲಿದೆ.ಪಾಕ್ ವಿರುದ್ಧದ ಯುದ್ದದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ ಹಾಗೂ ರಕ್ಷಣಾ ಸಚಿವರ ನಿರ್ಧಾರಕ್ಕೆ ಎಲ್ಲ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಒಕ್ಕೊರಲಿನ ಸಹಕಾರ ನೀಡಿದ್ದೇವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಮಾತನಾಡಿ ಯುದ್ಧ, ಯುದ್ದದಂತಹ ಸಂದರ್ಭ ಎದುರಿಸಲು, ಉಗ್ರರ ದಾಳಿ ನಿಯಂತ್ರಣ ಹಾಗೂ ದಾಳಿ ನಂತರ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಂದು ಜಾಗೃತಿ ಮೂಡಿಸುವಲ್ಲಿ ಅಣಕು ಪ್ರದರ್ಶನ ಯಶಸ್ವಿಯಾಗಿದೆ.ಇದಕ್ಕಾಗಿ ವಿವಿಧ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು.

ವಿವಿಧ ಇಲಾಖೆಗಳ ತಂಡಗಳ ಮೂಲಕ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗಿದೆ. ನಾಗರೀಕ ರೂ ಇಂತಹ ಸ್ಥಿತಿ ನಿರ್ವಹಿಸಲು ಪೂರ್ವಭಾವಿಯಾಗಿ ಸಿದ್ದರಿರುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಉಗ್ರರ ದಾಳಿ ನಿಯಂತ್ರಣ ಹಾಗೂ ಯುದ್ಧ ಯುದ್ದದಂತಹ ಸಂದರ್ಭ ಎದುರಿಸಲು ತುರ್ತಾಗಿ ತಂಡಗಳು ಕಾರ್ಯಾಚರಣೆ ನಡೆಸಿ ಕಡಿಮೆ ಅವಧಿಯಲ್ಲಿ ಕಡಿಮೆ ಜೀವಹಾನಿ ಹಾಗೂ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿ‌ಸುವ ಮತ್ತು ತಪ್ಪಿತಸ್ಥ ಭಯೋತ್ಪಾದಕರನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮತ್ತು ಪೂರ್ವಾಭ್ಯಾಸ ಇದಾಗಿದೆ.ಸಾರ್ವಜನಿಕರೂ ಸಹ ಸದಾ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.

ಸಂಪೂರ್ಣ ಅಣಕು ಪ್ರದರ್ಶನ ನಿರ್ವಹಣೆಯನ್ನು ಡಿ.ವೈ.ಎಸ್ಪಿ ಭಾರತ ಕುಮಾರ್ ವಹಿಸಿಕೊಂಡಿದ್ದರು.ಭಯೋತ್ಪಾನೆ ,ಡ್ರೋನ್ ದಾಳಿ,ನಂತರ ಪೋಲಿಸ್ ಇಲಾಖೆ, ಅಗ್ನಿ ಶಾಮಕ ಇಲಾಖೆ,ಎಸ್ ಡಿ ಆರ್,ಎಫ್ ತಂಡ, ಬಾಂಬ್ ಸ್ಕ್ವಾಡ್ ತಪಾಸಣಾ ತಂಡ,ಗಳ ಕಾರ್ಯಾಚರಣೆ ಗಮನ ಸೆಳೆದವು.

ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ
ಸಂಜೆ 4:30ಕ್ಕೆ ಬಾಂಬ್ ಬ್ಲಾಸ್ಟ್ ಮಾಡಿದ ನಂತರ ಮೊದಲ ತುರ್ತು ಪರಿಸ್ಥಿತಿ ಎಚ್ಚರಿಕೆ ಸೈರನ್ ಶಬ್ದ ಮೊಳಗಿಸಲಾಯಿತು. ಎರಡನೇ ಸೈರನ್ ಶಬ್ದವು ಬೆಂಕಿ ಅವಘಡ ಸಂಭವಿಸಿದ ನಂತರ ಮೊಳಗಿಸಲಾಯಿತು. ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಆರೋಗ್ಯ ಇಲಾಖೆಯಿಂದ ತುರ್ತಾಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಒಳಪಡಿಸಲಾಯಿತು. ನಂತರ ಉಗ್ರರ ರನ್ನು ಬಂಧಿಸುವುದು ಕಾನೂನು ರೀತ್ಯಾ ಪ್ರಕ್ರಿಯೆ ನಡೆಸುವ ವರದಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಮುಕ್ತಾಯಗೊಳಿಸಲಾಯಿತು.*

ಸ್ಥಳದಲ್ಲಿಯೇ ಉಗ್ರರನ್ನು ಹಿಡಿದ ಪೊಲೀಸ್ ಅಧಿಕಾರಿಗಳು.
ಬಾಂಬ್ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿ ಮೈದಾನದ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಇಬ್ಬರು ಉಗ್ರರಾದ ಅಜಮೋದ್ದಿನ್ ಮತ್ತು ರುಕ್ಕಮೊದ್ದಿನ್ ಎಂಬ ಉಗ್ರರರನ್ನು ಪೊಲೀಸ್ ಅಧಿಕಾರಿಗಳಾದ ರಮೇಶ, .. ನೇತೃತ್ಚದ ತಂಡ ಹುಡುಕಿ ಹೆಡೆಮುರಗಿ ಕಟ್ಟಿ ಎಳೆದು ತಂದು ಬಾಯಿ ಬಿಡಿಸಿದರು. ಆಗ ಅವರು ಜಮ್ಮು ಕಾಶ್ಮೀರದವರೆಂದು ಬಾಯಿ ಬಿಟ್ಟರು. ಅವರಲ್ಲಿ ಪಿಸ್ರೂಲ್ ಸೇರಿದಂತೆಯೇ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಬಂಧಿಸಿದರು.
—-
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button