Uncategorized
ಹೈಪ್ರೆಶರ್ ಬಾಯ್ಲರ ನಿರ್ವಹಣೆ ಮತ್ತು ಬಳಕೆಯ ಮಹತ್ವದ ಕುರಿತು ವಿಚಾರ ಸಂಕಿರಣ

ಹೈಪ್ರೆಶರ್ ಬಾಯ್ಲರ ನಿರ್ವಹಣೆ ಮತ್ತು ಬಳಕೆಯ ಮಹತ್ವದ ಕುರಿತು ವಿಚಾರ ಸಂಕಿರಣ
ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಹೈಪ್ರೆಶರ್ ಬಾಯ್ಲರ ನಿರ್ವಹಣೆ ಮತ್ತು ಬಳಕೆಯ ಕುರಿತು ತಾಂತ್ರಿಕ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರಾದ ರಾಜಗೋಪಾಲ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.. ಪುಣೆಯ ಥಮ್ರ್ಯಾಕ್ಸ ಬಾಯ್ಲರ್ ತಾಂತ್ರಿಕ ತಂತ್ರಜ್ಞರಾದ ಆರ್. ಅನಿಲ ರೆಡ್ಡಿ, ಮೀಟಕಾನ ಕಂಪನಿಯ ಮಾಜಿ ತಾಂತ್ರಿಕ ನಿರ್ದೇಶಕರಾದ ಶ್ರೀರಂಗ ಶಿರಾಳ್ಕರ, ಗೋಪಿಚಂದ್ರ ಗೌಡ, ಸಿ.ಬಿ. ಪಾಟೀಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿ. ಬಿ. ಪಾಟೀಲ, ಅವರುಸಕ್ಕರೆ ಕಾರ್ಖಾನೆಯಲ್ಲಿ ವಿವಿಧ ಪ್ರೆಶರ್ ಬಾಯ್ಲರ ಅಳವಡಿಕೆಯಿಂದ ಸ್ಟೀಮ್ ಹಾಗೂ ವಿದ್ಯುತ ಬಳಕೆ ಕಡಿತದ ಪ್ರಮಾಣ ಹಾಗೂ ಬಾಯ್ಲರ ರಚನೆಯ ಬಿಡಿ ಭಾಗಗಳ ನಿರ್ವಹಣೆಯ ಬಗ್ಗೆ ಮತ್ತು ಶುದ್ಧ ನೀರಿನ ಬಳಕೆ ಬಗ್ಗೆ ತಿಳಿಸಿದರು. ತದನಂತರ ರಾಜಗೋಪಾಲ, ನಿರ್ದೇಶಕರು ಇವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಬಾಯ್ಲಿಂಗ ಪಾಯಿಂಟ್ ಆಫ್ ಎಲಿವೇಶನ್ ಮತ್ತು ಪೀಡ್ ವಾಟರ್ ಟೆಂಪರೇಚರ್ನನ ಮಹತ್ವವನ್ನು ವಿವರಿಸುತ್ತಾ, ಸಕ್ಕರೆ ಕಾರ್ಖಾನೆಯಲ್ಲಿ ವಿವಿಧ ಸುಪರ್ಹೀನಟರ್, ಎಂ.ಇ. ಮತ್ತು ಇತರ ಆಧುನಿಕ ಉಪಕರಣಗಳ ಬಳಕೆಯಿಂದ ಸ್ಟೀಮ ಹಾಗೂ ವಿದ್ಯುತ ಶಕ್ತಿ ಬಳಕೆಯನ್ನು ಕಡಿತಗೊಳಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು. ಡಾ|| ಅವಿನಾಶ ಹಿರೇಮಠ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಹಾಗೂ ವಿವಿಧ ಕಾರ್ಖಾನೆಗಳ ಪ್ರತಿನಿಧಿಗಳಿಗೆ ಅಭಿನಂದಿಸಿದರು.
ಶ್ರೀರಂಗ ಶಿರಾಳ್ಕರ ಅವರು ತಮ್ಮ ಉಪನ್ಯಾಸದಲ್ಲಿ ಬಾಯ್ಲರ್ ಕ್ಷೇತ್ರದಲ್ಲಿ ಆಗುತ್ತಿರುವ ಅವಿಷ್ಕಾರಗಳು ಹಾಗೂ ಬಗ್ಯಾಸ್ದಿಂರದ ಸಹ ವಿದ್ಯುತ ಉತ್ಪಾದನೆಯಿಂದ ಆಗುವ ಲಾಭದ ಬಗ್ಗೆ ತಿಳಿಸುತ್ತಾ, ಆಧುನಿಕ ತಂತ್ರಜ್ಞಾನದಿಂದ ಸ್ಟೀಮ್ ಹಾಗೂ ವಿದ್ಯುತ ಶಕ್ತಿಯ ಬಳಕೆಯನ್ನು ಕಡಿತ ಮಾಡಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭಾಂಶ ಪಡೆಯಲು ಅವಕಾಶ ಇರುತ್ತದೆ ಹಾಗೂ ಬಾಯ್ಲರ್ ಘಟಕದ ನಿರ್ವಹಣೆ ಮತ್ತು ಗುಣಮಟ್ಟದ ನೀರಿನ ಬಳಕೆಯ ಬಗ್ಗೆ ತಿಳಿಸಿದರು..
ಆರ್. ಅನೀಲ ರೆಡ್ಡಿ, ಥಮ್ರ್ಯಾಕ್ಸ ಕಂಪ, ಪುಣೆ ಮತ್ತು ಶ್ರೀ.ಗೋಪಿಚಂದ್ರ ಗೌಡ, ಪುಣೆ ಇವರು ತಮ್ಮ ಉಪನ್ಯಾಸದಲ್ಲಿ ಬಾಯ್ಲರ್ ನಿರ್ವಹಣೆ ಮತ್ತು ಬಳಕೆಯ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು ಹಾಗೂ ಹಂಗಾಮಿನಲ್ಲಿ ಆಗುವ ಅಡೆತಡೆಗಳ ನಿರ್ವಹಣೆ ಮತ್ತು ಭಾಗವಹಿಸಿದ ಪ್ರತಿನಿಧಿಗಳ ಪ್ರಶ್ನೋತ್ತರಗಳಿಗೆ ಉತ್ತರಿಸಿದರು.
ಸದರಿ ವಿಚಾರ ಸಂಕಿರಣದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳ ಮತ್ತು ಸಹ ವಿದ್ಯುತ ಘಟಕಗಳಿಂದ ಸುಮಾರು 40 ತಾಂತ್ರಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ತಾಂತ್ರಿಕ ಸಲಹೆಗಾರ ಸಿ. ಬಿ. ಪಾಟೀಲ, ಕಾರ್ಯಕ್ರಮದ ವಂದನಾರ್ಪನೆಯನ್ನು ಮಾಡಿದರು.